ಬಿಎಸ್‌ಎನ್‌ಎಲ್ ಬಂಪರ್ ಕೊಡುಗೆ

Update: 2017-01-02 15:27 GMT

ಹೊಸದಿಲ್ಲಿ,ಜ.2: ಉಚಿತ ಕರೆಯ ಸೌಲಭ್ಯಗಳ ಕೊಡುಗೆಯನ್ನು ನೀಡುತ್ತಿರುವ ದೇಶದ ಹಲವು ಟೆಲಿಕಾಂ ಸಂಸ್ಥೆಗಳ ದಾರಿಯಲ್ಲಿಯೇ ಸಾಗಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್, ತನ್ನ ಗ್ರಾಹಕರಿಗೆ 144 ರೂ.ಗಳ ಉಚಿತ ಕರೆ ಸೌಲಭ್ಯವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.

  ಆರು ತಿಂಗಳ ಅವಧಿಗೆ ಸೀಮಿತವಾಗಿರುವ ಈ ಯೋಜನೆಯಡಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಬೇಕಾದರೂ ಒಂದು ತಿಂಗಳವರೆಗೆ ಅನಿಯಮಿತವಾಗಿ ದೂರವಾಣಿ ಕರೆ ಮಾಡಬಹುದಾಗಿದೆ.ಜೊತೆಗೆ ಅವರಿಗೆ 300 ಎಂಬಿಗಳ ಉಚಿತ ಡೇಟಾ ಸೌಲಭ್ಯ ಕೂಡಾ ದೊರೆಯಲಿದೆಯೆಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅನುಪಮ್ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಈ ಕರೆಗಳು ಸಂಪೂರ್ಣ ಉಚಿತವಾಗಿದ್ದು, ಪ್ರೀಪೇಯ್ಡ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರಿಬ್ಬರಿಗೂ ಲಭ್ಯವಾಗಲಿದೆಯೆಂದು ಶ್ರೀವಾಸ್ತವ ಹೇಳಿದ್ದಾರೆ. ಈಗಾಗಲೇ ದೇಶಾದ್ಯಂತ 4400 ವೈಫೈ ತಾಣಗಳನ್ನು ಬಿಎಸ್‌ಎನ್‌ಎಲ್ ಸ್ಥಾಪಿಸಲಾಗಿದ್ದು, , ಮುಂದಿನ ಒಂದು ವರ್ಷೆದಲ್ಲಿ ದೇಶಾದ್ಯಂತ 40 ಸಾವಿರ ವೈಫಿ ತಾಣಗನ್ನು ಸೃಷ್ಟಿಸಲಾಗುವುದೆಂದರು.

ಇದರ ಜೊತೆಗೆ, ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿಯೂ ಸೇವೆಯನ್ನು ವಿಸ್ತರಿಸಲು ಭಾರತ ಸರಕಾರದಿಂದ 2500 ಮೆಗಾಹರ್ಟ್ಸ್ ತರಂಗಾಂತರಗಳನ್ನು ಪಡೆದುಕೊಂಡಿದೆಯೆಂದು ಶ್ರೀನಿವಾಸನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News