ಸೇವೆಯಲ್ಲಿ ಪಾರದರ್ಶಕತೆ ಅಗತ್ಯ: ಐವನ್ ಡಿಸೋಜ
ಶಿರ್ವ, ಜ.2: ಸಮಾಜಸೇವೆಗೆ ಎರಡು ಮುಖಗಳಿದ್ದು ಪರ ಮತ್ತು ವಿರೋಧಗಳು ಸಾಮಾನ್ಯವಾಗಿದೆ. ಸೇವೆಯಲ್ಲಿ ಸ್ವತ: ತೊಡಗಿಸಿಕೊಂಡು, ಸಂಕಷ್ಟದಲ್ಲಿರುವವರಿಗೆ ಪ್ರೀತಿಯನ್ನು ನೀಡಿದಾಗ ಅದು ದೇವರ ಸೇವೆಯಾ ಗುತ್ತದೆ. ಸೇವೆಯಲ್ಲಿ ಪಾರದರ್ಶಕತೆ ಅಗತ್ಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಮುದರಂಗಡಿಯ ಕಂಪಾಶನೇಟ್ ಫ್ರೆಂಡ್ಸ್ ಅಸೋಸಿಯೇಶನ್‌ನ್ನು ಮುದರಂಗಡಿ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸೇವೆಯ ಪ್ರಥಮ ಆದ್ಯತೆ ತಾಯ್ನೆಲದ ಮಣ್ಣಿನ ಋಣ ತೀರಿಸುವುದು. ಗುರಿ ಮತ್ತು ಚಿಂತನೆಗಳು ಪೂರಕವಾದಾಗ ಮಾತ್ರ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಕಾಸರಗೋಡು ಬೇಳಾ ಚರ್ಚ್‌ನ ಧರ್ಮಗುರು ರೆ.ಫಾ.ವಿನ್ಸೆಂಟ್ ಡಿಸೋಜ, ಮುದರಂಗಡಿ ಸುನ್ನಿ ಜಾಮೀಯಾ ಮಸೀದಿ ಧರ್ಮಗುರು ಎಸ್.ಎಸ್.ಇದ್ರಿಸ್, ಸಾಂತೂರು ಸಂತ ಲೂಕನ ದೇವ ಮಂದಿರದ ಸಹಾಯಕ ಧರ್ಮಗುರು ವಂ.ದಿಲಾನ್, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಶುಭಹಾರೈಸಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ರಪಾಯಲ್ ಮತಾಯಸ್ ಸ್ವಾಗತಿಸಿದರು.
ಉಪಾಧ್ಯಕ್ಷ ಮೈಕಲ್ ರಮೇಶ್ ಡಿಸೋಜ ವಂದಿಸಿದರು.
ಕಾರ್ಯದರ್ಶಿ ಅನಿಲ್ ನೊರೋನ್ನಾ ಉಪಸ್ಥಿತರಿದ್ದರು.
ಶಿಕ್ಷಕ ಸುಧಾಕರ್ ಶೆಣೈ ಕಾರ್ಯ ಕ್ರಮ ನಿರೂಪಿಸಿದರು.