ಮದ್ಯ ನಿಷೇಧ ವಿರುದ್ಧದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲು ಬಿಹಾರ ಮನವಿ

Update: 2017-01-02 15:33 GMT

ಹೊಸದಿಲ್ಲಿ,ಜ.2: ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪಾಟ್ನಾ ಹೈಕೋರ್ಟ್‌ನಿಂದ ವರ್ಗಾಯಿಸಬೇಕೆಂದು ಕೋರಿ ಬಿಹಾರ ಸರಕಾರವು ಸೋಮವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ಬಿಹಾರ ಸರಕಾರದ ಮದ್ಯಪಾನ ನಿಷೇಧ ಅದ್ಯಾದೇಶದ ವಿರುದ್ಧ ವಿರುದ್ಧ ವಿವಿಧ ಮದ್ಯತಯಾರಿಕಾ ಕಂಪೆನಿಗಳು ಪಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಬಿಹಾರದಲ್ಲಿ ಮದ್ಯ ಮಾರಾಟ ಹಾಗೂ ನಿಷೇಧದ ಕುರಿತ ಅಧಿಸೂಚನೆಯನ್ನು ತಳ್ಳಿಹಾಕಿದ ಪಾಟ್ನಾ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಕೋರ್ಟ್ ಅಕ್ಟೋಬರ್‌ನಲ್ಲಿ ತಡೆಯಾಜ್ಞೆ ವಿಧಿಸಿತ್ತು.

ಮದ್ಯ ನಿಷೇಧದ ವಿರುದ್ಧ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಬೇಕೆಂದು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್‌ಈ ಬಗ್ಗೆ ಮದ್ಯ ತಯಾರಿಕಾ ಕಂಪೆನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಬಿಹಾರ ಮದ್ಯ ನಿಷೇಧ ಕಾಯ್ದೆಯನ್ನು ರದ್ದುಪಡಿಸಿರುವ ಪಾಟ್ನಾ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಬಿಹಾರ ಸರಕಾರವು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News