×
Ad

ಸಂಸದರ ಪ್ರಚೋದನಕಾರಿ ಹೇಳಿಕೆ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

Update: 2017-01-02 22:07 IST

ಮಂಗಳೂರು, ಜ. 2: ಕಾರ್ತಿಕ್ ರಾಜ್‌ರನ್ನು ಹತೈಗೈದ ಆರೋಪಿಗಳನ್ನು ಬಂಧಿಸದಿದ್ದರೆ ದ.ಕ. ಜಿಲ್ಲೆಗೆ ಬೆಂಕಿ ಹಚ್ಚುವೆನೆಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಅತ್ಯಂತ ಆಘಾತಕಾರಿಯಾದುದು ಮತ್ತು ಅಪಾಯಕಾರಿಯಾದುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಹೇಳಿದೆ.

ಕಾರ್ತಿಕ್ ರಾಜ್‌ನ ಹತ್ಯೆಗೆ ದ.ಕ. ಜಿಲ್ಲೆಯ ಜನರು ಕಾರಣರೇ? ದ.ಕ. ಜಿಲ್ಲೆಯ ಲಕ್ಷಾಂತರ ಮಂದಿಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ವ್ಯಕ್ತಿ ಎಂಬ ನೆಲೆಯಲ್ಲಿ ಈ ಮಾತಿನ ಸ್ಥಾನ-ಮಾನ ಏನು? ಜಿಲ್ಲೆಗೆ ಬೆಂಕಿ ಹಚ್ಚಲು ಸಿಕ್ಕ ಪರವಾನಿಗೆ ಎಂದು ಅವರ ಬೆಂಬಲಿಗರು ಈ ಮಾತನ್ನು ಪರಿಗಣಿಸಿದರೆ ಅದಕ್ಕೆ ಯಾರು ಹೊಣೆ? ಸಂಸದರು ಇಷ್ಟು ಕೀಳು ಮಟ್ಟದ ಹೇಳಿಕೆಯನ್ನು ಕೊಟ್ಟ ಬಳಿಕವೂ ಅವರ ವಿರುದ್ಧ ಬಿಜೆಪಿ ಯಾಕೆ ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ? ಅವರ ಹೇಳಿಕೆಯ ಕುರಿತು ಪಕ್ಷಕ್ಕೆ ಸಹಮತದೆಯೇ? ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಮುಹಮ್ಮದ್ ಕುಂಞಿ ಪ್ರಶ್ನಿಸಿದ್ದಾರೆ.

ಸಂಸದರ ಹೇಳಿಕೆ ಅತ್ಯಂತ ಪ್ರಚೋದನಕಾರಿಯಾದುದು ಮತ್ತು ಅತ್ಯಂತ ಬೇಜವಾಬ್ದಾರಿತನದ್ದು. ಅವರ ಈ ಹೇಳಿಕೆಯು ಮತ್ತೊಮ್ಮೆ ಜಿಲ್ಲೆಯನ್ನು ಹಿಂಸೆಗೆ ದೂಡುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯ ಸರ್ವರೂ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕಾಗಿದೆ. ಇಂತಹವರಿಗೆ ಜನರು ರಾಜಕೀಯ ಬಹಿಷ್ಕಾರವನ್ನು ಹೇರಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News