×
Ad

ನಳಿನ್ ಪ್ರಚೋದನಕಾರಿ ಭಾಷಣ: ಪಾಪ್ಯುಲರ್ ಫ್ರಂಟ್ ಖಂಡನೆ

Update: 2017-01-02 22:23 IST

ಮಂಗಳೂರು, ಜ. 2: ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ ಎಂಬ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಪ್ರಚೋದನಕಾರಿ ಭಾಷಣಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರೋರ್ವರು ಅಭಿವೃದ್ಧಿ, ಶಾಂತಿ, ಸಾಮರಸ್ಯ ಮತ್ತು ಸೌಹಾರ್ದದ ಬಗ್ಗೆ ಮಾತನಾಡುವುದನ್ನು ಬಿಟ್ಟು ದ್ವೇಷ ರಾಜಕೀಯವನ್ನು ಹರಡುವುದು ತರವಲ್ಲ. ಇದಂತೂ ಒಟ್ಟು ಜಿಲ್ಲೆಯ ಲಕ್ಷಾಂತರ ಜನರನ್ನು ಅಪಮಾನಿಸುವುದಕ್ಕೆ ಸಮ. ಅಲ್ಲದೆ, ಇದು ಬಿಜೆಪಿಯ ಅಸಲಿ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ಕಾನೂನಿನ ಮುಂದೆ ಎಲ್ಲಾರೂ ಸಮಾನರು ಅನ್ನೋದನ್ನು ಜಿಲ್ಲೆಯ ಪೊಲೀಸ್ ಇಲಾಖೆ ಸಾಬೀತು ಪಡಿಸಬೇಕಾಗಿದೆ.  ಪ್ರಚೋದನಕಾರಿ ಭಾಷಣ ಮಾಡಿದ ಸಂಸದರ ಮೇಲೆ ಕ್ರಮಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News