×
Ad

ವಿಟ್ಲ : ಪಲ್ಲಮಜಲು ಸ್ವಲಾತ್ ವಾರ್ಷಿಕ ಸಮಾರೋಪ

Update: 2017-01-02 23:09 IST

ವಿಟ್ಲ , ಜ.2 : ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಮಸೀದಿ ವಠಾರದಲ್ಲಿ ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಾರ್ಯಕ್ರಮ ಉದ್ಘಾಟಿಸಿದರು.

ಸಯ್ಯಿದ್ ಮುಹಮ್ಮದ್ ಶಫೀಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈದರು.

ಸ್ಥಳೀಯ ಖತೀಬ್ ಯಾಕೂಬ್ ಫೈಝಿ, ಪುತ್ತೂರು-ಕುಂಬ್ರ ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ ಮುಖ್ಯ ಭಾಷಣಗೈದರು.

ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ಪಲ್ಲಮಜಲು ಘಟಕಾಧ್ಯಕ್ಷ ಪಿ. ರಹೀಂ, ಮುಬಾರಕ್ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷ ಶಬೀರ್ ಪಿ., ಅಸಾಸುಲ್ ಇಸ್ಲಾಂ ಸ್ಟೂಡೆಂಟ್ಸ್ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಅಬ್ದುಲ್ಲ, ಇರ್ಶಾದ್ ದಾರಿಮಿ ಜಝರಿ ಮಿತ್ತಬೈಲು, ಉದ್ಯಮಿ ಇಲ್ಯಾಸ್, ಅಬ್ದುಲ್ ಮಜೀದ್ ಫೈಝಿ ನಂದಾವರ, ಮಸೀದಿ ಉಪಾಧ್ಯಕ್ಷ ಪಿ.ಎಂ. ಇಸಾಕ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಶರೀಫ್, ಕೋಶಾಧಿಕಾರಿ ಎಂ. ಇಸ್ಮಾಯಿಲ್, ಮಸೀದಿ ಮಾಜಿ ಖತೀಬ್ ಎನ್.ಕೆ. ಮುಹಮ್ಮದ್ ಮುಸ್ಲಿಯಾರ್, ಮದ್ರಸ ಆಧ್ಯಾಪಕರಾದ ಎನ್.ಎ. ಇಬ್ರಾಹಿಂ ಬಾತಿಷ ಅರ್ಹರಿ, ಅಕ್ಬರ್ ಅಲಿ ಮುಸ್ಲಿಯಾರ್, ಕೆ. ಯಾಕೂಬ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ವಾನೆ ಮದೀನಾ ಬುರ್‌ದಾ ತಂಡದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು.

ಮಸೀದಿ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಸ್ವಾಗತಿಸಿದರು , ಗೌರವಾಧ್ಯಕ್ಷ ಹಾಜಿ ಸಿ.ಕೆ. ಸೂಫಿ ಮುಸ್ಲಿಯಾರ್ ವಂದಿಸಿದರು.

ಈ ಪ್ರಯುಕ್ತ ನಡೆದ ಧಾರ್ಮಿಕ ಪ್ರಚನ ಕಾರ್ಯಕ್ರಮದಲ್ಲಿ ಮಿತ್ತಬೈಲು ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ, ಕೇರಳ-ತೆಕ್ಕಿಲ್ ಜುಮಾ ಮಸೀದಿ ಖತೀಬ್ ಕೆ.ಬಿ. ಅಬ್ಬಾಸ್ ದಾರಿಮಿ ಉಪನ್ಯಾಸಗೈದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News