×
Ad

ಕೆರೆಯನ್ನು ಅತಿಕ್ರಮಣ ಮಾಡಿದ್ದು ಖುಲ್ಲಾಪಡಿಸಿ : ಜಿಲ್ಲಾಧಿಕಾರಿಗಳಿಗೆ ಮನವಿ

Update: 2017-01-02 23:15 IST
ಬಿ.ಎಫ್.ಬೆಂಡಿಗೇರಿ

 ಮುಂಡಗೋಡ , ಜ.2  :ಮಳಗನಕೊಪ್ಪ ಗ್ರಾಮ ಸರ್ವೆನಂ 54 ರ ಸರಕಾರಿ ಕೆರೆಯನ್ನು ತನ್ನ ಲಾಭಕ್ಕಾಗಿ ಅತಿಕ್ರಮಣ ಮಾಡಿ ನೀರು ಹೋಗುವುದನ್ನು ತಡೆದಿರುವುದು ಹಾಗೂ ಅತಿಕ್ರಮಣ ಮಾಡಿರುವ ಕೆರೆಯನ್ನು ಖುಲ್ಲಾ ಪಡಿಸುವ ಕುರಿತು ಪ್ರಗತಿ ಪರ ರೈತ ಬಿ.ಎಫ್.ಬೆಂಡಿಗೇರಿ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಅರ್ಪಿಸಿದ್ದಾರೆ

 ಮನವಿಯಲ್ಲಿ ಮುಂಡಗೋಡ ಸರ್ವೆನಂ 31, 32 ಹಾಗೂ ಇತರೆ ರೈತರ ಹೊಲಗಳಿಗೆ ಸರಕಾರಿ ಕೆರೆ ಸರ್ವೆ ನಂ 54ದಿಂದ ಹರಿದು ಬರುತ್ತಿದ್ದ ನೀರು ಸರ್ವೆ ನಂ 33 ರ ಅಣ್ಣಪ್ಪ ಕೆ ಎನ್ನುವ ರೈತ ಕೆರೆಯ ಭಾಗವನ್ನು ತನ್ನ ಲಾಭಕ್ಕಾಗಿ ಅತಿಕ್ರಮಣ ಮಾಡಿ ಕೆರೆಯ ಒಡ್ಡು ಒಡೆದು ಕೆರೆಯಿಂದ ಸಾಗಿ ಬರುತ್ತಿರುವ ನೀರಿನ ಹರಿಯುವ ತುಂಬನ್ನು ಮುಚ್ಚಿದ್ದರಿಂದ ನೀರು ಹೊಲಗಳಿಗೆ ಬರುತ್ತಿಲ್ಲಾ. ಕೆರೆಯ ಮಡಿಯನ್ನು ಜೆಸಿಬಿ ಯಂತ್ರದಿಂದ ಒಡೆದು ಮಣ್ಣನ್ನು ಸರಿಸಿದ್ದರಿಂದ ಮಣ್ಣು ಕೆರೆಯಲ್ಲಿ ಬಿದ್ದು ಹೂಳು ತುಂಬಿ ಕೊಳ್ಳುತ್ತಿದೆ. ಹೀಗೆ ಮಾಡಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಇದರಿಂದ ಪೀಕ ಪಾಣಿ ನಾಶವಾಗುತ್ತಾ ಸಾಗಿದೆ. ಈ ಕುರಿತು ಅತಿಕ್ರಮಣ ಮಾಡಿಕೊಂಡಿರುವ ಅಣ್ಣಪ್ಪ ಕೆ ಅವರನ್ನು ವಿಚಾರಿಸಿದಾಗ ನನಗೆ ಈ ಕುರಿತು ಸರ್ವೆ ಆಫೀಸನವರು ಚೆಕ್ ಬಂದಿ ತೊರಿಸಿದ್ದಾರೆ .ಇದು ನನಗೆ ಸಂಬಂದ ಪಟ್ಟಿದ್ದು ನೀವು ಬೇಕಾದರೆ ಏನಾದರೂ ಮಾಡಿಕೊಳ್ಳಿ ನಾನು ಯಾವುದಕ್ಕೂ ಜಗ್ಗವನಲ್ಲ ಎಂದು ಉತ್ತರಿಸುತ್ತಿದ್ದಾನೆ. ಈತ ಅತಿಕ್ರಮಣ ಮಾಡಿಕೊಂಡಿರುವ ಕುರಿತು ಪಕ್ಕದ ಹೊಲದ ರೈತ ರಾಮಣ್ಣ ಕುನ್ನೂರ ಈ ವಿಷಯವಾಗಿ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡಿರುತ್ತಾರೆ.

ಕೆರೆ ಒಡ್ಡನ್ನು ಒಡೆದು, ನೀರು ಹರಿಯುವುದನ್ನು ತಡೆದಿರುವುದರಿಂದ ಮಳೆಗಾಲದಲ್ಲಿ ಹುಬ್ಬಳ್ಳಿ ಶಿರಸಿ ರಸ್ತೆಯ ಮೇಲೆ ನೀರು ಬಂದು ನಿಲ್ಲುತ್ತಿರುವುದರಿಂದ ವಾಹನಗಳಿಗೂ ಸಾರ್ವಜನಿಕರಿಗೂ ತುಂಬಾ ತೊಂದರೆಯಾಗುತ್ತಿದೆ. ಪಿಡ್ಲ್ಯೂಡಿ ಚಿಕ್ಕ ನೀರಾವರಿ ಇಲಾಖೆಗಳು ಮಾಡಿದಂತ ಕಾಮಗಾರಿಗಳು ನಾಶಪಡಿಸಿದ್ದಾನೆ.

 ಆದ್ದರಿಂದ ಖುದ್ದು ಕೆರೆಗೆ ಭೇಟಿನೀಡಿ ಅತಿಕ್ರಮಣ ಮಾಡಿದ್ದು ಅಲ್ಲದೆ ಸರಕಾರಿ ಕೆರೆಗೆ ಸರಕಾರಿ ಇಲಾಖೆಗಳು ಮಾಡಿದಂತಹ ಕೆಲಸವನ್ನು ನಾಶಪಡಿಸಿ ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮಾಡಿದಂತಹ ಲುಕ್ಸಾನನ್ನು ತಿಳಿದುಕೊಂಡು, ಅತಿಕ್ರಮಣ ದಾರನಿಂದ ಅತಿಕ್ರಮಣ ಜಾಗೆಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಸರಕಾರಕ್ಕೆ ಮಾಡಿದಂತಹ ಲುಕ್ಸಾನ ತುಂಬಿಸಿಕೊಂಡು ಹಾಗೂ ನನ್ನ ಹೊಲಕ್ಕೆ ನೀರು ಬರುವಂತೆ ಮಾಡಬೇಕು ಹಾಗೂ ಮಳೆಗಾಲದಲ್ಲಿ ವಾಹನಗಳಿಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News