×
Ad

ಅಧ್ಯಕ್ಷ ಒಬಾಮ, ಮುಸ್ಲಿಮರಿಗೆ ಪ್ರವೇಶವಿಲ್ಲ: ಬೋರ್ಡು ಮಾರಾಟಕ್ಕಿಟ್ಟ ಅಮೆರಿಕದ ಸಂಸ್ಥೆ ವಿವಾದದಲ್ಲಿ

Update: 2017-01-03 13:00 IST

ನ್ಯೂಯಾರ್ಕ್,ಜ.3: ಜನಾಂಗೀಯ ದ್ವೇಷ ಕಾರುವ ಪೋಸ್ಟರ್ ಬರೆದು ಮಾರಾಟಕ್ಕಿಟ್ಟ ಅಮೆರಿಕದ ವ್ಯಾಪಾರಿ ಸಂಸ್ಥೆಯೊಂದು ವಿವಾದಕ್ಕೆ ಗುರಿಯಾಗಿದೆ. "ಮುಸ್ಲಿಮರು ಮತ್ತು ಒಬಾಮಗೆ ಇಲ್ಲಿ ಪ್ರವೇಶ ಇಲ್ಲ, ಒಬಾಮ ಟಾಯ್ಲೆಟ್ ಪೇಪರ್, ಒಬಾಮರನ್ನು ಕೊಲ್ಲುತ್ತೇವೆ" ಎನ್ನುವ ಪೋಸ್ಟರ್‌ಗಳನ್ನು ನ್ಯೂ ಮೆಕ್ಸಿಕೊದ ವಾಪಾರಿ ಸಂಸ್ಥೆಯೊಂದು ಮಾರಾಟಕ್ಕೆ ಇಟ್ಟಿದೆ. ವಿದ್ವೇಷಕಾರಿ ಬರಹವಿರುವ ಪೋಸ್ಟರ್‌ಗಳನ್ನು ಒಂದು ವರ್ಷದಿಂದ ಇಲ್ಲಿ ಮಾರಲಾಗುತ್ತಿದೆ ಎಂದು ಅಂಗಡಿಯ ಮಾಜಿ ನೌಕರ ಮರ್ಲನ್ ಎಂ.ಸಿ. ವಿಲ್ಯಮ್ಸ್ ಹೇಳಿದ್ದಾರೆ. ಕಪ್ಪುವರ್ಣೀಯರಿಗೆ ಪೊಲೀಸರು ನೀಡುತ್ತಿರುವ ಹಿಂಸೆಯನ್ನು ಖಂಡಿಸಿದ್ದ ಮಾಜಿ ನ್ಯಾಶನಲ್ ಫುಟ್ಬಾಲ್ ಲೀಗ್ ತಾರೆ ಕಾಲಿನ್ ಕಪರ್ನಿಕ್‌ರನ್ನು ಜನಾಂಗೀಯವಾಗಿ ಆಕ್ಷೇಪಿಸುವ ಪೋಸ್ಟರ್‌ಗಳು ಕೂಡಾ ಇಲ್ಲಿ ಸಿಗುತ್ತಿವೆ.

ಹೆಚ್ಚು ಬೆಲೆಕೊಟ್ಟು ಖರೀದಿಸಿದ ಮಿಶ್ರತಳಿ ಜಂತು ಕಪರ್ನಿಕ್. ಈತ ಆಫ್ರಿಕಕ್ಕೆ ಕೂಡಲೇ ಮರಳಿ ಹೋಗಬೇಕೆಂದು ಪೋಸ್ಟರ್‌ನಲ್ಲಿ ಬರಹವಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಸ್ಥೆಯ ಕೃತ್ಯ ವಿವಾದವಾಗಿದೆ. ಆದರೆ, ಪೊಲೀಸರು ಯಾವಕ್ರಮಕ್ಕೂ ಮುಂದಾಗಿಲ್ಲ. ಕನಿಷ್ಠ ತನಿಖೆಗೂ ಸಿದ್ಧವಾಗಿಲ್ಲ ಹಾಗೂ ಈ ಸಂಸ್ಥೆಯನ್ನು ಈಗ ಮಾರಾಟಕ್ಕಿರಿಸಲಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಬಳಿಕ ಅಮೆರಿಕದಲ್ಲಿ ಮುಸ್ಲಿಮ್ ವಿರೋಧಿ 900 ಪ್ರಕರಣಗಳು ವರದಿಯಾಗಿವೆ. 2015ಕ್ಕೆ ಹೋಲಿಸಿದರೆ 2016ರಲ್ಲಿ ಶೇ.65ರಷ್ಟು ಮುಸ್ಲಿಮ್ ವಿರೋಧಿ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ ಎಂದು ಎಫ್ ಬಿಐ ಈ ಹಿಂದೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News