×
Ad

ಫೇಸ್‌ಬುಕ್‌ನಲ್ಲಿ ಹೆರಿಗೆ ದೃಶ್ಯ ಲೈವ್

Update: 2017-01-03 14:11 IST

ಲಂಡನ್,ಜ.3: 35 ವರ್ಷ ವಯಸ್ಸಿನ ಬ್ರಿಟಿಷ್ ಮಹಿಳೆಯೊಬ್ಬರ ಹೆರಿಗೆ ದೃಶ್ಯಗಳು ಫೇಸ್‌ಬುಕ್‌ನಲ್ಲಿ ಲೈವ್ ಆಗಿವೆ. ಹೆರಿಗೆ ಸಂಬಂಧಿಸಿದ ಐದು ದೃಶ್ಯಗಳನ್ನು ಜಾಹೀರಾತು ಏಜೆನ್ಸಿ ನಿರ್ದೇಶಕಿ ಸಾರ ಜೇನ್ ಲುಂಗ್‌ಸ್ಟಾಂ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಸಿನೆಮಾಗಳಲ್ಲಿ ತೋರಿಸುವುದಕ್ಕಿಂತ ಸಂಪೂರ್ಣ ಭಿನ್ನ ಸ್ಥಿತಿ ನೈಜ ಹೆರಿಗೆ ಸಂದರ್ಭವಾಗಿದೆ ಎಂದು ತಿಳಿಸುವುದಕ್ಕಾಗಿ ಹೆರಿಗೆ ಲೈವ್‌ಸ್ಟ್ರೀಂ ಮಾಡಿದೆ ಎಂದು ಸಾರಾ ಹೇಳಿಕೊಂಡಿದ್ದಾರೆ. ಮಗು ಹೊರಬಂದ ನಂತರ ಸಾರಾಜೇನ್ ಹೆಣ್ಣುಮಗು ಎಂದು ಹೇಳುವುದು ಹಾಗೂ ಮಗುವನ್ನು ಇವಾಲಿನ ಬ್ಲಾಸಂ ಎಂದು ಕರೆಯುವುದು ವೀಡಿಯೊದಲ್ಲಿ ಕಾಣಬಹುದು.ಸಾರಾ ಜೇನ್‌ರ ಮೂರನೆ ಮಗು ಲೈವ್ ಆಗಿ ಜನಿಸಿದೆ ಎಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News