×
Ad

ನಳಿನ್ ಪ್ರಚೋದನಾತ್ಮಕ ಭಾಷಣದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ : ಪೊಲೀಸ್ ಕಮೀಷನರ್

Update: 2017-01-03 16:44 IST

ಮಂಗಳೂರು, ಜ.3 : ಮಂಗಳೂರು ಸಂಸದ ನಳಿನ್ ರ  ಪ್ರಚೋದನಾತ್ಮಕ ಭಾಷಣದ ಬಗ್ಗೆನ್ಯಾಯಲಯಕ್ಕೆ  ಮಾಹಿತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು , ಐಪಿಸಿ ಸೆಕ್ಷನ್ 506 ರಡಿ  ಪ್ರಕರಣ ದಾಖಲಿಸಲಾಗಿದೆ.ನ್ಯಾಯಲಯದ ನಿರ್ದೇಶನ ದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾವ ರಾಜಕೀಯ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

ಜ. 1 ರಂದು ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತ್ವರಿತ ತನಿಖೆಗೆ ಆಗ್ರಹಿಸಿ  ಕೊಣಾಜೆಯಲ್ಲಿ ನಡೆಸಿದ  ಪ್ರತಿಭಟನಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ‘ ಕೊಲೆಗಾರರನ್ನು 10 ದಿನಗಳೊಳಗೆ  ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಬೀಳುವ ಸಾಧ್ಯತೆ ಇದೆ  ‘ ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು.

ಈ  ಹೇಳಿಕೆಯ ವಿರುದ್ಧ ನಾನಾ ಕಡೆಯಿಂದಲೂ ಪ್ರತಿಭಟನೆ , ದೂರುಗಳು  ದಾಖಲಾದ ನಂತರ ಎಚ್ಚೆತ್ತ ಸಂಸದರು ಬಳಿಕ ತನ್ನ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News