ಕುಕ್ಕಿನಡ್ಕ ಶ್ರಿ ಸುಬ್ರಾಯ ದೇವಸ್ಥಾನದಲ್ಲಿ ಉಚಿತ ಇಂಟರ್‌ನೆಟ್ ಸೇವಾ ಕೇಂದ್ರ ಸೌಲಭ್ಯ
ಪುತ್ತೂರು , ಜ.3 : ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಡೂರು ಪಜಿಮಣ್ಣು ಕುಕ್ಕಿನಡ್ಕ ಶ್ರಿ ಸುಬ್ರಾಯ ದೇವಸ್ಥಾನದಲ್ಲಿ ‘ಶ್ರೀ ಷಣ್ಮುಖ ಸೇವಾ ಕೇಂದ್ರ’ವನ್ನು ಸ್ಥಾಪಿಸಲಾಗುತ್ತಿದ್ದು, ಈ ಭಾಗದ ಸಾರ್ವಜನಿಕರು ಇದರ ಉಪಯೋಗವನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಳದ ಕಾರ್ಯಾಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರದ ಮಹತ್ತರ ಯೋಜನೆಯಾದ ಡಿಜಿಟಲ್ ಇಂಡಿಯಾಕ್ಕೆ ಪೂರಕವಾಗಿ ಈ ಕೇಂದ್ರವು ಸಹಕಾರ ನೀಡಲಿದೆ. ಕೇಂದ್ರದ ಮೂಲಕ ಈ ಭಾಗದ ಜನರಿಗೆ ಉದ್ಯೋಗ ಮಾಹಿತಿ, ಆನ್‌ಲೈನ್ ಅರ್ಜಿ ಸಲ್ಲಿಕೆ, ಆಧಾರ್ ಕಾರ್ಡ್, ಪಡಿತರ ಚೀಟಿ ನೋಂದಣಿ, ಜೆರಾಕ್ಸ್ ಮತ್ತಿತರ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಸೇವಾ ಕೇಂದ್ರವನ್ನು ಜ.6ರಂದು ಪುತ್ತೂರು ತಹಸೀಲ್ದಾರ್ ಅನಂತಶಂಕರ್ ಅವರು ಉದ್ಘಾಟಿಸಲಿದ್ದಾರೆ. ಮೂಡಂಬೈಲು ರವಿ ಶೆಟ್ಟಿ ಮತ್ತು ನೇಸರ ಕಂಪ ಅವರು ಕೇಂದ್ರದ ಪ್ರಾಯೋಜಕರಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಕ್ಲು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಶ್ರೀ ಸುಬ್ರಾಯ ದೇವಸ್ಥಾನದ ಟ್ರಸ್ಟಿಗಳಾದ ಸುರೇಶ್ ಕಣ್ಣಾರಾಯ, ಸುಧೀರ್ ಕುಮಾರ್ ಶೆಟ್ಟಿ ನೇಸರ ಮತ್ತು ಸದಾಶಿವ ಪಟ್ಟೆ ಉಪಸ್ಥಿತರಿದ್ದರು.