ಮಂಗಳೂರಿನಲ್ಲಿ ‘ದಿ ಮಿರೆಕಲ್ : ಆ್ಯನ್ ಎಕ್ಸಿಬಿಷನ್ ಆನ್ ಇಸ್ಲಾಮ್’ ಕುರಿತ ಪ್ರದರ್ಶನ

Update: 2017-01-03 14:04 GMT

ಮಂಗಳೂರು, ಜ. 3: ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ಇದರ ವತಿಯಿಂದ ಸರ್ವಧರ್ಮಿಯರಿಗಾಗಿ ‘ದಿ ಮಿರೆಕಲ್: ಆ್ಯನ್ ಎಕ್ಸಿಬಿಷನ್ ಆನ್ ಇಸ್ಲಾಮ್’ ಕುರಿತ ಬೃಹತ್ ಪ್ರದರ್ಶನ ಜನವರಿ 9 ರಿಂದ 15 ರವರೆಗೆ ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ ಎಂದು ಸಲಫಿ ಅಸೋಸಿಯೇಷನ್ ಅಧ್ಯಕ್ಷ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ ಸರ್ವಧರ್ಮೀಯರ ನಡುವೆ ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಅವರು ಹೇಳಿದರು.

ಅಂದಾಜು 30 ಸಾವಿರ ಚದರಡಿ ವಿಸ್ತೀರ್ಣದ ಹವಾನಿಯಂತ್ರಿತ ಟೆಂಟ್‌ಗಳಲ್ಲಿ 500 ಪ್ಯಾನಲ್‌ಗಳು, ವಿಡಿಯೋ ಥಿಯೇಟರ್ ಮತ್ತು ಮಾದರಿಗಳ ಪ್ರದಶರ್ನವನ್ನು ಏರ್ಪಡಿಸಲಾಗುವುದು. ಕಾರ್ಯಕ್ರಮವು ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ಜರಗಲಿದ್ದು , ಸಂಜೆ 5ರಿಂದ ರಾತ್ರಿ 10 ರವರೆಗೆ ಇಸ್ಲಾಂನ ಪ್ರಸಿದ್ಧ ವಿದ್ವಾಂಸರಿಂದ ಪ್ರವಚನ ನಡೆಯಲಿದೆ.

ಸಂಸದ ನಳಿನ್‌ಕುಮಾರ್ ಕಟೀಲ್, ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಭಾಗವಹಿಸಲಿದ್ದಾರೆ ಎಂದು ಮುಹಮ್ಮದ್ ಹನೀಫ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಇಜಾಝ್ ಸ್ವಲಾಹಿ, ಅಬೂಬಕರ್, ನಝೀರ್ ಸಲಫಿ ಹಾಗೂ ಅಬ್ದುಲ್‌ರಶೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News