ಚಿಟ್‌ಫಂಡ್ ಹಗರಣ : ಸಿಬಿಐಯಿಂದ ಟಿಎಂಸಿ ಸಂಸದ ಬಂದ್ಯೋಪಾಧ್ಯಾಯ ವಿಚಾರಣೆ
Update: 2017-01-03 20:08 IST
ಕೋಲ್ಕತಾ, ಜ.3: ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಪ್ರಶ್ನೆಗೆ ಉತ್ತರಿಸಲು ಲೋಕಸಭಾ ಸಂಸದ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಸುದೀಪ್ ಬಂದ್ಯೋಪಾಧ್ಯಾಯ ಅವರಿಂದು ಸಿಬಿಐ ಎದುರು ಹಾಜರಾದರು.
ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ತನ್ನ ಮತ್ತು ಪಕ್ಷದ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದೆ ಎಂದು ಆರೋಪಿಸಿದ ಬಂದ್ಯೋಪಾಧ್ಯಾಯ, ತನ್ನ ವಿರುದ್ಧ ಯಾವ ಪ್ರಕರಣ ದಾಖಲಾಗಿದೆ ಎಂದು ತಿಳಿದುಕೊಳ್ಳಲು ಸಿಬಿಐ ತನಿಖೆಗೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದೆ. ಆ ಪ್ರಕಾರ ಬಂದಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಟಿಎಂಸಿ ಪಕ್ಷದ ಮತ್ತೋರ್ವ ಸಂಸದ ತಪಸ್ ಪಾಲ್ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದೆ. ಈ ಪ್ರಕರಣದಲ್ಲಿ ಶಾರದಾ ಚಿಟ್‌ಫಂಡ್ ಹಗರಣಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ವಂಚನೆಯಾಗಿದ್ದು, ಪ್ರಕರಣದ ಕುರಿತು ಇ.ಡಿ.(ಜಾರಿ ನಿರ್ದೇಶನಾಲಯ) ಕೂಡಾ ತನಿಖೆ ನಡೆಸುತ್ತಿದೆ.