ನ್ಯಾಷನಲ್ ಕಾನ್ಫರೆನ್ಸ್ ಮುಖಂಡನಿಂದ ಭಯೋತ್ಪಾದಕ ಬರ್ಹಾನ್ ವಾನಿಗೆ ಹುತಾತ್ಮ ಪಟ್ಟ
Update: 2017-01-03 20:15 IST
ಜಮ್ಮು, ಜ.3: ಹತ್ಯೆಗೀಡಾಗಿರುವ ಹಿಝ್‌ಬುಲ್ ಮುಜಾಹುದೀನ್ ಭಯೋತ್ಪಾದಕ ನನ್ನು ಹುತಾತ್ಮ ಎಂದು ಬಣ್ಣಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಿಧಾನಪರಿಷತ್ ಸದಸ್ಯ ಶಗತ್ ಹುಸೇನ್ ಗನ್ನೈ ಅವರ ಕೃತ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬರ್ಹಾನ್ ವಾನಿ ಕಾಶ್ಮೀರದ ಕಾರಣಕ್ಕಾಗಿ ತನ್ನ ಜೀವವನ್ನೇ ಬಲಿದಾನ ಮಾಡಿರುವ ಹುತಾತ್ಮ ಎಂದು ಗನ್ನೈ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾನು ಈ ಪ್ರತಿಕ್ರಿಯೆ ನೀಡಿರುವುದಾಗಿ ಗನ್ನೈ ಹೇಳಿದ್ದಾರೆ.
ಈ ಮೊದಲು, ಪಾಕಿಸ್ತಾನದ ಪ್ರಧಾನಿ ನವಾಝ್ ಷರೀಫ್ ಅವರೂ ಕೂಡಾ ಬಹಾನಿಯನ್ನು ಹುತಾತ್ಮ ಎಂದು ವ್ಯಾಖ್ಯಾನಿಸಿದ್ದು, ಆತ ಮೃತಪಟ್ಟ ದಿನವಾದ ಜುಲೈ 19ನ್ನು ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಕಾಶ್ಮೀರಿಗಳ ಜನರೊಂದಿಗೆ ಐಕ್ಯತೆ ಪ್ರದರ್ಶಿಸಲಾಗುವುದು ಎಂದಿದ್ದರು.