×
Ad

ಕೆ.ಸಿ ರೋಡು: ದ್ಸಿಕ್ರ್ ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮ

Update: 2017-01-03 21:17 IST

ಉಳ್ಳಾಲ , ಜ.3 : ಅಲ್ ಮುಬಾರಕ್ ಜುಮಾ ಮಸೀದಿ ಕೆ.ಸಿ.ರೋಡ್, ಕೋಟೆಕಾರ್ ಇದರ ವತಿಯಿಂದ 25ನೇ ದ್ಸಿಕ್ರ್ ವಾರ್ಷಿಕೋತ್ಸವ ಹಾಗೂ 8 ದಿವಸಗಳ ಧಾರ್ಮಿಕ ಕಾರ್ಯಕ್ರಮವು ಅಲ್ ಮುಬಾರಕ್ ಜುಮಾ ಮಸೀದಿ ವಠಾರ ಕೆ.ಸಿ. ರೋಡ್‌ನಲ್ಲಿ ನಡೆಯಲಿದೆ.

 ಜನವರಿ 6 ಶುಕ್ರವಾರ ಅಸ್ಸಯ್ಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ನೆರವೇರಿಸಲಿದ್ದಾರೆ.

ಉಡುಪಿ ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 

ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮತ್ತು ಇಬ್ರಾಹಿಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜನವರಿ 7 ಶನಿವಾರ ಹನೀಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಹಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜನವರಿ 8 ಆದಿತ್ಯವಾರ ಅಬ್ದುಲ್ ಅಝೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಫಿ ಅಹ್‌ಸನಿ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದು, ಜನವರಿ 9 ಸೋಮವಾರ ಪಿ.ಎಂ.ಮುಹಮ್ಮದ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಬ್ದುಲ್ ಮಜೀದ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜನವರಿ 10 ಮಂಗಳವಾರ ಅಬ್ದುಲ್ ಅಝೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜನವರಿ 11 ಬುಧವಾರ ಅಬ್ದುಲ್ಲತೀಫ್ ಸಅದಿ ಕಾರ್ಯಕ್ರವುವನ್ನು ಉದ್ಘಾಟಿಸಿ, ಹಂಝ ಮಿಸ್ಬಾಹಿ ಓಟೆಪದವು ತೃಕ್ಕರಿಪುರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜನವರಿ 12 ಗುರುವಾರ ಅಬ್ದುಲ್ ಬಾರಿ ಅದಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜನವರಿ 13 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ದ್ಸಿಕ್ರ್ ವಾರ್ಷಿಕ ಸಮಾರೋಪ ಸಮಾರಂಭ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಎ.ಎಂ.ಅಬ್ಬಾಸ್ ಹಾಜಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮುನೀರ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಕೂಟು ಪ್ರಾರ್ಥನೆಗೆ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News