ಕಾರು- ಬೈಕ್ ಢಿಕ್ಕಿ: ಸವಾರ ಮೃತ್ಯು
Update: 2017-01-03 21:26 IST
ಬ್ರಹ್ಮಾವರ, ಜ.3: ಉಪ್ಪೂರು ಗ್ರಾಮದ ದುರ್ಗಾಪರಮೇಶ್ವರಿ ದೇವ ಸ್ಥಾನದ ಬಳಿ ತಿರುವಿನಲ್ಲಿ ರಾತ್ರಿ ವೇಳೆ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಅಮ್ಮುಂಜೆಯ ಅಪ್ಪು ಸಿ.ಬಂಗೇರ(60) ಎಂದು ಗುರುತಿಸ ಲಾಗಿದೆ.
ಕೊಳಲಗಿರಿ ಕಡೆಯಿಂದ ಕೆಜಿರೋಡ್ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದರೆ, ಕಾರು ಮಗುಚಿ ರಸ್ತೆ ಬದಿಗೆ ಬಿದ್ದಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಅಪ್ಪು ಬಂಗೇರ ಮಣಿ ಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.