ಎಲ್‌ಪಿಜಿ ಸಿಲಿಂಡರ್‌ಗೆ ಆನ್‌ಲೈನ್ ಪಾವತಿಯಲ್ಲಿ ರಿಯಾಯಿತಿ
Update: 2017-01-03 21:43 IST
ಹೊಸದಿಲ್ಲಿ,ಜ.3: ಪೆಟ್ರೋಲ್ ಮತ್ತು ಡೀಸೆಲ್‌ಗಳ ಬಳಿಕ ಈಗ ಆನ್‌ಲೈನ್ ಮೂಲಕ ಎಲ್‌ಪಿಜಿ ಸಿಲಿಂಡರ್‌ನ್ನು ಬುಕ್ ಮಾಡಿದರೆ ಮತ್ತು ಹಣ ಪಾವತಿಸಿದರೆ ಪ್ರತಿ ಸಿಲಿಂಡರ್ ಮೇಲೆ ಐದು ರೂ.ರಿಯಾಯಿತಿ ದೊರೆಯಲಿದೆ.
ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್‌ನ್ನು ಖರೀದಿಸಿ ಕಾರ್ಡ್ ಮೂಲಕ ಪಾವತಿಸಿದರೆ ಶೇ.0.75 ರಿಯಾಯಿತಿ ದೊರೆಯುತ್ತದೆ. ಇದನ್ನು ಈಗ ಅಡುಗೆ ಅನಿಲಕ್ಕೂ ವಿಸ್ತರಿಸಿದ್ದು, ಗ್ರಾಹಕರು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಹಣ ಪಾವತಿಸಿ ಪ್ರತಿ ಸಿಲಿಂಡರ್‌ಗೆ ಐದು ರೂ. ರಿಯಾಯಿತಿ ಗಳಿಸಬಹುದಾಗಿದೆ.