×
Ad

ತೀಸ್ತಾ ಸೆಟರ್ವಾಡ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Update: 2017-01-03 21:47 IST

ಹೊಸದಿಲ್ಲಿ,ಜ.3: ವಿದೇಶಿ ನೆರವು ನಿಯಮಗಳ ಉಲ್ಲಂಘನೆಗಾಗಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಅವರ ಪತಿ ಜಾವೇದ್ ಆನಂದ್ ಮತ್ತು ಅವರು ನಡೆಸುತ್ತಿರುವ ಕಂಪನಿಯ ವಿರುದ್ಧ ಸಿಬಿಐ ಮುಂಬೈನ ನ್ಯಾಯಾಲಯವೊಂದರಲ್ಲಿ ಆರೋಪಪಟ್ಟಿಯನ್ನು ದಾಖಲಿಸಿದೆ.

ಆರೋಪಪಟ್ಟಿಯು ಸಬರಂಗ್ ಕಮ್ಯುನಿಕೇಷನ್ಸ್ ಆ್ಯಂಡ್ ಪಬ್ಲಿಷಿಂಗ್ ಪ್ರೈ.ಲಿ. ಮತ್ತು ಸುಷ್ಮಾರಮಣ ಎಂಬ ವ್ಯಕ್ತಿಯ ಹೆಸರನ್ನೂ ಒಳಗೊಂಡಿದೆ.

ಗೃಹ ಸಚಿವಾಲಯದ ಪೂರ್ವಾನುಮತಿಯನ್ನು ಪಡೆದುಕೊಳ್ಳದೆ ವಿದೇಶಗಳಿಂದ ಆರ್ಥಿಕ ನೆರವು ಸ್ವೀಕರಿಸಿದ್ದ ಆರೋಪದಲ್ಲಿ ಸೆಟಲ್ವಾಡ್ ಮತ್ತಿತರರ ವಿರುದ್ಧ ಸಿಬಿಐ 2015,ಜುಲೈನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News