ಪ್ಯಾನಲ್ ವಕೀಲರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ
ಉಡುಪಿ, ಜ.3: ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ವಕೀಲರ ಸಂಘದ ವತಿಯಿಂದ ಪ್ಯಾನಲ್ ವಕೀಲರಿಗೆ ಉಡುಪಿ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ವೆಂಕಟೇಶ್ ನಾಯ್ಕ ಟಿ. ಮಂಗಳವಾರ ಉದ್ಘಾಟಿಸಿದರು.
ವಕೀಲರಲ್ಲಿ ಉತ್ತಮ ಜ್ಞಾನ, ವಿಮರ್ಶತ್ಮಾಕ ಚಿಂತನೆಗಳು ಅತಿಮುಖ್ಯ. ಪುಸ್ತಕ ಓದುವುದು ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿ ಸಿಕೊಳ್ಳಬೇಕು. ಪ್ಯಾನಲ್ ವಕೀಲರು ತರಬೇತಿಯಿಂದ ತಮ್ಮ ಅರಿವು ಹಾಗೂ ಕಾನೂನು ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ವೆಂಕಟೇಶ್ ನಾಯ್ಕಿ ಹೇಳಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಪ್ರಾಧಿಕಾರದ ರಾಜ್ಯ ತರಬೇತಿದಾರ ಐ.ಎಸ್.ಆಂಟಿನ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಿವರಾಂ ಕೆ., ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಉಪಸ್ಥಿತರಿದ್ದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಲತಾ ಸ್ವಾಗತಿಸಿದರು.
ಶ್ವೇತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಮೂಲಭೂತ ಹಕ್ಕು ಗಳು ಮತ್ತು ಕರ್ತವ್ಯಗಳು, ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣಗಳ ನಿರ್ವ ಹಣೆ, ರಸ್ತೆ ಸುರಕ್ಷತೆ ಮತ್ತು ಪಾಲಿಸಬೇಕಾದ ನಿಯಮಗಳು, ನ್ಯಾಯಾಲಯ ಗಳಲ್ಲಿ ಕ್ರಿಮಿನಲ್ ಪ್ರಕರಣಗಳ ನಿರ್ವಹಣೆ ಮತ್ತು ವಕೀಲ ವೃತ್ತಿಯ ನೆಪು ಣ್ಯತೆ ಕುರಿತು ಅಧಿವೇಶನ ನಡೆಯಿತು.