×
Ad

ಭರತನಾಟ್ಯದ ಸ್ಕಾಲರ್‌ಶಿಪ್‌ಗೆ ಅಯನಾ ವಿ.ರಮಣ್ ಪುನರಾಯ್ಕೆ

Update: 2017-01-03 23:01 IST

ಮೂಡುಬಿದಿರೆ, ಜ.3 : ಕೇಂದ್ರ ಸರಕಾರದ ಸಿಸಿಆರ್‌ಟಿ ನೀಡುವ ಭರತನಾಟ್ಯದ ಸ್ಕಾಲರ್‌ಶಿಪ್‌ಗೆ ಇಲ್ಲಿನ ಅಯನಾ ವಿ.ರಮಣ್ ಪುನರಾಯ್ಕೆಯಾಗಿದ್ದಾರೆ.

2013 ರಿಂದ ಈ ವಿದ್ಯಾರ್ಥಿವೇತನ ಪಡೆಯುತ್ತಿರುವ ಅಯನಾ ಮುಂದಿನ ಎರಡು ವರ್ಷಗಳ ಅವಧಿಯ ಉನ್ನತೀಕರಿಸಿದ ಮೌಲ್ಯಕ್ಕೆ ಅರ್ಹತೆ ಪಡೆದಿದ್ದಾರೆ.

 ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಅಯನಾ ವಿ.ರಮಣ್, ಪತ್ರಕರ್ತ-ಕಲಾವಿದ ಕೆ.ವಿ.ರಮಣ್ ಮತ್ತು ಆಳ್ವಾಸ್ ಕಾಲೇಜು ಉಪನ್ಯಾಸಕಿ ಮುಕಾಂಬಿಕಾ ಜಿ.ಎಸ್.ದಂಪತಿಯ ಪುತ್ರಿ.

ಮಂಗಳೂರಿನ ವಿದುಷಿ ಶಾರದಾಮಣಿ ಶೇಖರ್ ಮತ್ತು ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣ ರಾಜು ಅವರ ಶಿಷ್ಯೆಯಾಗಿದ್ದು, ಇಲ್ಲಿನ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಂಸ್ಕೃತಿಕ ದತ್ತು ಸ್ವೀಕಾರದ 9 ನೇ ತರಗತಿಯ ವಿದ್ಯಾರ್ಥಿನಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News