×
Ad

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

Update: 2017-01-03 23:42 IST

ಕೊಣಾಜೆ, ಜ.3 :  ಬ್ಲಡ್ ಹೆಲ್ಪ್ ಲೈನ್ ವತಿಯಿಂದ ಹರೇಕಳದಲ್ಲಿ ಸಾರ್ವಜನಿಕವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಸಖಾಫಿ ದುವಾ ನೆರವೇರಿಸಿದರು.

ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಅಡ್ಮಿನ್ ಆದ ಮುಸ್ತಫಾ ಅಡ್ಡೂರು ದೆಮ್ಮಲೆ ವಹಿಸಿದ್ದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕಾಧ್ಯಕ್ಷ ನಿಸಾರ್ ಉಳ್ಳಾಲ ದಮ್ಮಾಮ್ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವೆಬ್ ಸೈಟನ್ನು ಲೋಕಾರ್ಪನೆ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ತುರ್ತು ರಕ್ತವನ್ನು ನಿಗದಿತ ಸಮಯದಲ್ಲಿ ಶೇಖರಿಸುವಲ್ಲಿ ಯಶಸ್ವಿಯಾದವರಿಗೆ ಬಳಗದ ವತಿಯಿಂದ ಪ್ರಶಸ್ತಿಯನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ಅಥಿತಿಯಾಗಿ ಬ್ಲಡ್ ಹೆಲ್ಪ್ ಲೈನ್ ಉಡುಪಿ ವಲಯದ ಎಡ್ಮಿನ್ ಫಯಾರ್ ಅಲಿ ಬೈಂದೂರು, ಹಾರೀಸ್ ಮಲಾರ್, ಆಸಿಫ್ ಮಲಾರ್, ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ಡಬ್ಬೇಲಿ , ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಯೇನೆಪೋಯ ಬ್ಲಡ್ ಬ್ಯಾಂಕ್ ಅಧಿಕಾರಿ ಎಂ.ಎಸ್.ಶರೀಫ್, ಏನೆಪೋಯ ಆಸ್ಪತ್ರೆಯ ಡಾ. ಅಮೀರ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಅಬ್ದುಲ್ ಖಾದರ್ ಹಾಗೂ ಗಝಾಲಿ ಅಕ್ಬರ್ ಆಲಿ, ಯೂಸುಫ್ ರಹ್ಮಾನ್, ಖಾಲಿದ್ ಕೊಳ್ನಾಡು, ಮುಸ್ತಫಾ ಹರೇಕಳ, ಸಾದಿಕ್ ಪಾವೂರು, ಫೈಝಲ್ ಮಂಚಿ, ಶಮೀರ್ ಉಳೈಬೆಟ್ಟು, ಅಶ್ರಫ್ ಅಪೋಲೋ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News