ಕೆ.ಸಿ.ರೋಡ್: ಜ.6ರಿಂದ 8 ದಿನಗಳ ಧಾರ್ಮಿಕ ಕಾರ್ಯಕ್ರಮ

Update: 2017-01-03 18:36 GMT

ಉಳ್ಳಾಲ, ಜ.3: ಅಲ್ ಮುಬಾರಕ್ ಜುಮಾ ಮಸೀದಿ ಕೆ.ಸಿ.ರೋಡ್, ಕೋಟೆಕಾರ್ ಇದರ ವತಿಯಿಂದ 25ನೆ ದ್ಸಿಕ್ರ್ ವಾರ್ಷಿಕೋತ್ಸವ ಹಾಗೂ 8 ದಿವಸಗಳ ಧಾರ್ಮಿಕ ಕಾರ್ಯಕ್ರಮವು ಅಲ್ ಮುಬಾರಕ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ.6ರಂದು ಅಸೈಯ್ಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ನೆರವೇರಿಸಲಿದ್ದಾರೆ. ದ.ಕ. ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಇಬ್ರಾಹೀಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

7ರಂದು ಹನೀಫ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. 8ರಂದು ಅಬ್ದುಲ್ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಫಿ ಅಹ್ಸನಿ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. 9ರಂದು ಪಿ.ಎಂ.ಮುಹಮ್ಮದ್ ಮದನಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಬ್ದುಲ್ ಮಜೀದ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

 10ರಂದು ಅಬ್ದುಲ್ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸೈಯದ್‌ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

11ರಂದು ಅಬ್ದುಲ್ಲತೀಫ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ, ಹಂಝ ಮಿಸ್ಬಾಹಿ ಓಟೆಪದವು ತೃಕ್ಕರಿಪುರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

 12ರಂದು ಅಬ್ದುಲ್ ಬಾರಿ ಸಅದಿ ಕಾರ್ಯಕ್ರಮ ಉದ್ಘಾಟಿಸಿ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

13ರಂದು ಮಗ್ರಿಬ್ ನಮಾಝಿನ ಬಳಿಕ ದ್ಸಿಕ್ರ್ ವಾರ್ಷಿಕ ಸಮಾರೋಪ ಸಮಾರಂಭ ನಡೆಯಲಿದ್ದು ಇಬ್ರಾಹೀಂ ಮದನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎ.ಎಂ.ಅಬ್ಬಾಸ್ ಹಾಜಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುನೀರ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಸೈಯದ್‌ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಕೂಟು ಪ್ರಾರ್ಥನೆಗೆ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News