ದಂಡಪ್ಪಗೆ ‘ಇನಾಂದಾರ ವಿಮರ್ಶಾ ಪ್ರಶಸ್ತಿ’ ಪುರಸ್ಕಾರ

Update: 2017-01-03 18:38 GMT

ಉಡುಪಿ, ಜ.3: ಕನ್ನಡದ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಪ್ರೊ. ವಿ. ಎಂ. ಇನಾಂದಾರ ಅವರ ಹೆಸರಿನಲ್ಲಿ ನೀಡಲಾಗುವ 2015ನೆ ಸಾಲಿನ ‘ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ’ಗೆ ಖ್ಯಾತ ಸಾಹಿತಿ, ಸಂಶೋಧಕ ಹಾಗೂ ವಿಮ ರ್ಶಕ ಎಚ್. ದಂಡಪ್ಪಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ಟರು ತಿಳಿಸಿದ್ದಾರೆ.

ಬೆಂಗಳೂರಿನ ಕೊಂಡ್ರಹಳ್ಳಿಯವರಾದ ಎಚ್.ದಂಡಪ್ಪ, ಎಂ.ಎ. ಪದವಿಯನ್ನು ಪಡೆದ ನಂತರ ಅಧ್ಯಾಪಕರಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ, ಉಪಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಅನೇಕ ವಿಮರ್ಶಾತ್ಮಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

 ದಂಡಪ್ಪ ಅವರು ಅನೇಕ ಕೃತಿಗಳನ್ನು ಸಂಪಾದಿಸಿದ್ದು, ಬಡವರ ನಗುವಿನ ಶಕ್ತಿ, ಡಾ. ಸಿದ್ದಲಿಂಗಯ್ಯ ಸಾಹಿತ್ಯ ವಾಚಿಕೆ, ಸುವರ್ಣ ಸಾಹಿತ್ಯ ವಿಮರ್ಶೆ, ನೀರೊಳಗಿನ ಬೆಳಕು, ಹೊನ್ನಾರುಪ್ರಮುಖವಾದವು. ದಂಡಪ್ಪ ಅವರ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಮರ್ಶಾ ಸಂಕಲನ ‘ಭ್ರಮರ ಮತ್ತು ಕೀಟ’ ಕೃತಿಗೆ 2015ರ ವಿ.ಎಂ.ಇನಾಂದಾರ್ ಸ್ಮಾರಕ ವಿಮರ್ಶಾ ಪ್ರಶಸ್ತಿ ಲಭಿಸಿದ್ದು, ಮಾರ್ಚ್ ತಿಂಗಳಲ್ಲಿ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News