ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣೆಗೆ ಅಮೆರಿಕ ಪೆನ್ಸಿಲ್ವೇನಿಯಾ ಯುನಿವರ್ಸಿಟಿ ಶ್ಲಾಘನೆ

Update: 2017-01-03 18:41 GMT

ಮಂಗಳೂರು, ಜ.3: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ವಾಗಿ ಶ್ರಮಿಸುತ್ತಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಕಾರ್ಯನಿರ್ವಹಣೆಯನ್ನು ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಪ್ರಾಧ್ಯಾ ಪಕರು ಮತ್ತು ಅಧ್ಯಯನ ತಂಡ ಶ್ಲಾಘಿಸಿದೆ.

ಮಂಗಳವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಈ ಅಧ್ಯಯನ ತಂಡ ಮೈಕ್ರೋ ಫೈನಾನ್ಸ್ ಮತ್ತು ಸ್ವಸಹಾಯ ಗುಂಪು ಯೋಜನೆಯ ಅನುಷ್ಠಾನದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಅಧ್ಯಯನ ನಡೆಸಿದೆ.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಈ ಸಂದರ್ಭ ಮಾತನಾಡಿ, ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಬಡ ವರ್ಗದ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡು ತ್ತಿದ್ದು, ಮಹಿಳಾ ಸಬಲೀಕರಣದ ಹಾದಿಯಲ್ಲಿ ಆದಾಯೋತ್ಪನ್ನ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಗಳನ್ನು ನೀಡಿ, ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಬ್ಯಾಂಕ್ ಪ್ರೇರಕ ಶಕ್ತಿಯಾಗಿದೆ ಎಂದರು.

ಅಮೆರಿಕ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿ ಯಾದ ಸಮಾಜಸೇವೆ ಮತ್ತು ಅಧ್ಯಯನ ತಂಡದ ನೇತೃತ್ವ ವಹಿಸಿದ ಪ್ರೊ. ಪೆಮೀಡಾ ಹ್ಯಾಂಡಿ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಗ್ರಾಮಾಂತರ ಪ್ರದೇಶದ ಬಡವರ್ಗದ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿ ಗಳಾಗಿದ್ದಾರೆ. ಬ್ಯಾಂಕ್ ವಿಶೇಷವಾಗಿ ಮಹಿಳೆಯರ ಶಕ್ತಿ ಸಂವರ್ಧನೆಗೆ ಹೆಚ್ಚು ಮಹತ್ವವನ್ನು ನೀಡುತ್ತಿದೆ. ಬ್ಯಾಂಕ್‌ನ ಗುಣಾತ್ಮಕ ಬೆಳವಣಿಗೆಯಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಅವಿರತ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ವಿಕಸನಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಬ್ಯಾಂಕ್ ಮತ್ತು ನವೋದಯ ಟ್ರಸ್ಟ್ ಮಾಡುತ್ತಿರುವ ಸಮಾಜ ಸೇವೆಯನ್ನು ಪ್ರೊ. ಪೆಮೀಡಾ ಹ್ಯಾಂಡಿ ಈ ಸಂದರ್ಭದಲ್ಲಿ ಪ್ರಶಂಸಿದರು

ಕಳೆದ ಐದು ವರ್ಷಗಳಿಂದಲೂ ಬ್ಯಾಂಕ್ ಹಾಗೂ ನವೋದಯ ಟ್ರಸ್ಟ್‌ನ ಕಾರ್ಯಾಚರಣೆಯ ಬಗ್ಗೆ ಈ ಅಧ್ಯಯನ ತಂಡ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಆಗಮಿಸುತ್ತಿದ್ದು, ತಂಡದಲ್ಲಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಕಾಟೆಲಿನ್, ಇಸಾಬೆಲ್, ಮೋನಿಕಾ, ಲಾರಾ ವಿಲಿಯಂ ಸನ್, ಎಟ್ರಾಸ್ ಚಾಂಗ್, ಕೋರ್ಟ್ನಿ ಬೈಲ್ಸ್, ಸ್ಯೂಯಿ ಚೆನ್, ಲಾರೆನ್ ಕಾರ್ಡೋಸ್, ರಿಚರ್ಡ್ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವಿನೋದ್ ದೀಕ್ಷಿತ್ ಮತ್ತಿತರರಿದ್ದರು.

  ಬ್ಯಾಂಕ್‌ನ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್, ವಿನಯ ಕುಮಾರ್ ಸೂರಿಂಜೆ, ಎಂ. ವಾದಿರಾಜ್ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಕೆ.ಎಸ್.ದೇವರಾಜ್, ರಘುರಾಮ್ ಶೆಟ್ಟಿ, ರಾಜು ಪೂಜಾರಿ, ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ, ಎಸ್.ಬಿ ಜಯರಾಮ್ ರೈ, ದೇವಿಪ್ರಸಾದ್ ಶೆಟ್ಟಿ ಬೆಳಪು, ಬ್ಯಾಂಕ್‌ನ ಸಿಇಒ ಸತೀಶ್ ಎಸ್., ಬ್ಯಾಂಕ್‌ನ ಸಲಹೆಗಾರ ಕೆ.ಎಸ್ . ಹಿಮವಂತ ಗೋಪಾಲ್, ನವೋದಯ ಟ್ರಸ್ಟ್ ಸಿಇಒ ಪೂರ್ಣಿಮಾ ಶೆಟ್ಟಿ, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಇಒ ರತ್ನಾಕರ್ ಶೆಟ್ಟಿ ಮತ್ತಿತ ರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News