ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನೌಕೆಯ ಅಭ್ಯಾಸ
Update: 2017-01-04 00:16 IST
ಬೀಜಿಂಗ್, ಜ. 3: ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪಾರಮ್ಯ ಪ್ರತಿಪಾದನೆಯನ್ನು ಚೀನಾ ಮುಂದುವರಿಸಿದ್ದು, ಅದರ ಪ್ರಥಮ ವಿಮಾನವಾಹಕ ಯುದ್ಧ ನೌಕೆ ಹಾಗೂ ಇತರ ನೌಕೆಗಳು ಕಸರತ್ತು ನಡೆಸಿವೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೈವಾನ್ ಅಧ್ಯಕ್ಷೆಯ ಜೊತೆ ಫೋನ್‌ನಲ್ಲಿ ಮಾತನಾಡಿದ ಬಳಿಕ, ಚೀನಾ ಮತ್ತು ಅಮೆರಿಕಗಳ ನಡುವೆ ಉದ್ವಿಗ್ನತೆ ತಲೆದೋರಿದೆ. ವಿಮಾನವಾಹಕ ನೌಕೆ ‘ಲಿಯಾವೊನಿಂಗ್’ ನಿನ್ನೆ ದಕ್ಷಿಣ ಚೀನಾ ಸಮುದ್ರದಲ್ಲಿ ಹಾರಾಟ ಮತ್ತು ಭೂಸ್ಪರ್ಶ ಅಭ್ಯಾಸಗಳನ್ನು ನಡೆಸಿದವು ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.