ಸರಕಾರ ಉರುಳಿಸಿ: ರಾಜಪಕ್ಸೆಗೆ ಲಂಕಾ ಪ್ರಧಾನಿ ಸವಾಲು
Update: 2017-01-04 00:17 IST
ಕೊಲಂಬೊ, ಜ. 3: ತನ್ನ ಸರಕಾರವನ್ನು ಉರುಳಿಸುವಂತೆ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರಿಗೆ ಇಂದು ಸವಾಲು ಹಾಕಿದ್ದಾರೆ.
ಈ ವರ್ಷ ಸರಕಾರವನ್ನು ಉರುಳಿಸುವ ಮೂಲಕ ತಾನು ರಾಜಕೀಯ ಮರುಪ್ರವೇಶ ಮಾಡುವುದಾಗಿ ರಾಜಪಕ್ಸೆ ಎಚ್ಚರಿಕೆ ನೀಡಿದ ದಿನಗಳ ಬಳಿಕ ಈ ಸವಾಲು ಎದುರಾಗಿದೆ.
‘‘ನಾನು ಮುಂದಿನ ವಾರ ಸ್ವಿಟ್ಸರ್‌ಲ್ಯಾಂಡ್‌ಗೆ ಒಂದು ವಾರದ ಪ್ರವಾಸಕ್ಕಾಗಿ ಹೋಗುತ್ತೇನೆ. ಈ ಅವಧಿಯಲ್ಲಿ ಮಹಿಂದ ನನ್ನ ಸರಕಾರವನ್ನು ಉರುಳಿಸಬಹುದು’’ ಎಂದು ಕೊಲಂಬೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಕ್ರಮಸಿಂೆ ಹೇಳಿದರು.