ಇಂದು ಮಲಪ್ಪುರಂನ ಪಟ್ಟಿಕಾಡ್ ಜಾಮಿಅ ನೂರಿಯ ಅರೆಬಿಕ್ ಕಾಲೇಜಿನ ವಾರ್ಷಿಕ ಸಮ್ಮೇಳನ
ುಂಗಳೂರು, ಜ.3: ದಕ್ಷಿಣ ಭಾರತದ ಅತ್ಯುನ್ನತ ವಿದ್ಯಾಕೇಂದ್ರವೆನಿಸಿ ರುವ ಮಲಪ್ಪುರಂನ ಪಟ್ಟಿಕಾಡ್ ಜಾಮಿಅ ನೂರಿಯ ಅರೆಬಿಕ್ ಕಾಲೇಜಿನ 54ನೆ ವಾರ್ಷಿಕ ಮತ್ತು 52ನೆ ಸನದು ದಾನ ಮಹಾಸಮ್ಮೇಳನವು ಜ.4ರಂದು ಜರಗಲಿದೆ ಎಂದು ದ.ಕ. ಜಿಲ್ಲಾ ೈಝೀಸ್ ಸಂಘಟನಾ ಕಾರ್ಯದರ್ಶಿ ಎ.ಎಂ.ಅಬೂಸ್ವಾಲಿಹ್ ೈಝಿ ಅಕ್ಕರಂಗಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೈದರ್ ಅಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ಜ.5ರಂದು ಸಂಜೆ ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಜ.6ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೇರಳ ವಿಧಾನಸಭಾ ಸ್ಪೀಕರ್ ಪಿ. ರಾಮಕೃಷ್ಣನ್ ಉದ್ಘಾಟಿಸುವರು. ಸಂಜೆ ನಡೆಯುವ ಸಂಕಿರಣವನ್ನು ಕರ್ನಾಟಕದ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಜ.7ರಂದು ವಿದ್ಯಾಭ್ಯಾಸ ಕುರಿತ ವಿಚಾರಸಂಕಿರಣ ನಡೆಯಲಿದ್ದು, ರಾಷ್ಟ್ರದಾದ್ಯಂತ ಹಲವಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಜ.8ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ 250 ವಿದ್ಯಾರ್ಥಿಗಳಿಗೆ ೈಝಿ ಬಿರುದು ಪ್ರದಾನ ಮಾಡಲಾಗುವುದು ಎಂದು ಅಬೂಸ್ವಾಲಿಹ್ ೈಝಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ೈಝೀಸ್ ಜಿಲ್ಲಾಧ್ಯಕ್ಷ ಹಾಜಿ ಉಮರ್ ೈಝಿ ಸಾಲ್ಮರ, ಪ್ರ.ಕಾರ್ಯದರ್ಶಿ ಶರ್ೀ ೈಝಿ, ಸುಲೈಮಾನ್ ೈಝಿ ಕನ್ಯಾನ ಮೊದಲಾದವರು ಉಪಸ್ಥಿತರಿದ್ದರು.