ಉಪ್ಪಳ ಬಳಿ ಭೀಕರ ಅಪಘಾತ: ನಾಲ್ವರ ದಾರುಣ ಸಾವು
Update: 2017-01-04 09:23 IST
ಉಪ್ಪಳ, ಜ.4: ರಾಷ್ಟ್ರೀಯ ಹೆದ್ದಾರಿ 44ರ ಉಪ್ಪಳ ನಯಾಬಝಾರ್ ಬಳಿ ಇಂದು ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ದಾರುಣ ಸಾವನ್ನಪ್ಪಿದ್ದಾರೆ.
ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ರಕ್ಕೊಂದು ಸ್ವಿಫ್ಟ್ ಕಾರಿಗೆ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೃಶೂರ್ ಚೇಳಕ್ಕರ ನಿವಾಸಿ ಡಾ.ರಾಮನಾರಾಯಣ ಸಿ.ಕೆ(52), ಪತ್ನಿ ವತ್ಸಲಾ(48),ಪುತ್ರ ರಂಜಿತ್(20), ಗೆಳೆಯ ನಿತಿನ್(20) ಮೃತಪಟ್ಟಿದ್ದಾರೆ.