ನೀರಿನ ಗುಂಡಿಗೆ ಬಿದ್ದು ಮಗು ಮೃತ್ಯು
Update: 2017-01-04 12:00 IST
ಮುಂಡಗೋಡ, ಜ.4: ಎರಡು ವರ್ಷದ ಮಗುವೊಂದು ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಣಿಕಂಟ ಮಹಾಬಲೇಶ್ವರಗಿರಿ ಗೋಸಾವಿ ಮೃತಪಟ್ಟ ಮಗು.
ಗ್ರಾಮಸ್ಥರು ಮಗು ನೀರಿನ ಗುಂಡಿಗೆ ಬಿದ್ದಿರುವುದನ್ನು ಪೋಷಕರ ಗಮನಕ್ಕೆ ತಂದಿದ್ದು, ಗುಂಡಿಯಿಂದ ಮಗುವನ್ನು ಹೊರತೆಗೆದಾಗ ಉಸಿರಾಟ ನಡೆಯುತ್ತಿತ್ತು. ತಕ್ಷಣ ತಾಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗುವನ್ನು ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಹೇಳಲಾಗಿದೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.