ಎತ್ತಿನಹೊಳೆ ವಿಚಾರದಲ್ಲಿ ರಾಜಕೀಯ ಬೇಡ: ಕಲ್ಲಡ್ಕ ಪ್ರಭಾಕರ ಭಟ್
Update: 2017-01-04 12:29 IST
ಮಂಗಳೂರು, ಜ.4: ಎತ್ತಿನಹೊಳೆ ಯೋಜನೆಗೆ ಬಿಜೆಪಿ ಬೆಂಬಲ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಯಡಿಯೂರಪ್ಪರವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಆದರೆ ಎತ್ತಿನಹೊಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಈ ಬಗ್ಗೆ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ಕಳೆದ ವರ್ಷ ಮಂಗಳೂರಲ್ಲಿ ನೀರಿಗೆ ಅಭಾವ ಉಂಟಾಗಿದ್ದು, ಜೀವನದಿ ನೇತ್ರಾವತಿ ಬತ್ತಿ ಹೋಗಬಾರದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡಕ್ಕೆ ಬೆಂಕಿ ಹೇಳಿಕೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ವಿವಾದ ಸಮಾಪ್ತಿಗೊಳಿಸಿದ್ದೇನೆ. ನನ್ನ ಮೇಲೆ ಎಫ್ ಐ ಆರ್ ದಾಖಲು ಸಂಬಂಧಿಸಿ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದರು.