ತನ್ನದೇ ಕುಟುಂಬದ 10 ಜನರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ

Update: 2017-01-04 10:25 GMT

ಅಮೇಥಿ(ಉ.ಪ್ರ),ಜ.4: ಇಲ್ಲಿಯ ಮನೋವಾ ಪ್ರದೇಶದ ನಿವಾಸಿಯೋರ್ವ ತನ್ನ ಕುಟುಂಬದ ಹತ್ತು ಜನರನ್ನು ಹತ್ಯಗೈದು,ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಇಂದು ತಿಳಿಸಿದರು. 45ರ ಹರೆಯದ ಜಮಲು ಮೊದಲು ತನ್ನ ಕುಟುಂಬದ 12 ಸದಸ್ಯರು ಕೀಟನಾಶಕವನ್ನು ಸೇವಿಸುವಂತೆ ಮಾಡಿ,ನಂತರ ಅವರ ಪೈಕಿ 10 ಜನರನ್ನು ಮಾರಕಾಯುಧದಿಂದ ಕೊಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಬಳಿಕ ಜಮಲು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬದುಕುಳಿದಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News