ಉಚ್ಚಿಲಗುಡ್ಡೆ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ

Update: 2017-01-04 11:42 GMT

ಉಳ್ಳಾಲ, ಜ.4: ಉಚ್ಚಿಲ ಗುಡ್ಡೆ, ಸೋಮೇಶ್ವರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ, ಉಚಿತ ದಂತ ಕುಂಚ ಮತ್ತು ದಂತ ಚೂರ್ಣ ವಿತರಣ ಕಾರ್ಯಕ್ರಮ ಬುಧವಾರ ಜರುಗಿತು.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಶಾಲಾಭಿವೃದ್ಧಿ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಈ ಕ್ರಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚೂಂತಾರುಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ  ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಮಕ್ಕಳಿಗೆ ಹಲ್ಲುಗಳ ರಕ್ಷಣೆ, ಹಲ್ಲುಗಳ ಆರೋಗ್ಯಕ್ಕೆ ಪೂರಕವಾದ ಆಹಾರ ಕ್ರಮ ಮತ್ತು ದಂತ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಜಂಕ್ ಫುಡ್ ತ್ಯಜಿಸಿ, ನೈಸರ್ಗಿಕ ಪೇಯಗಳು ಮತ್ತು ತಾಜಾ ಹಣ್ಣು ಹಂಪಲು, ಗೆಡ್ಡೆ ಪಲ್ಯ , ಹಸಿ    ತರಕಾರಿ ಸೇವಿಸುವಂತೆ ಕಿವಿಮಾತು ಹೇಳಿದರು.

ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸತ್ಯಮ್ಮ ಪ್ರಾಸ್ತವಿಕವಾಗಿ ಮಾತನಾಡಿ,  ಮಕ್ಕಳ ಆರೋಗ್ಯ ರಕ್ಷಣೆ ಹೆತ್ತವರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ ಎಂದು ಹೇಳಿದರು.  

ಶಾಲಾ ಶಿಕ್ಷಕರಾಗಿ ಚಂದ್ರಶೇಖರ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ವಂದನಾರ್ಪಣೆ ಮಾಡಿದರು.

ಶಾಲಾ ಶಿಕ್ಷಕಿಯರಾದ ರಾಜೀವಿ, ಬಬಿತಾ ಮುಂತಾದವರು ಉಪಸ್ಥಿತರಿದ್ದರು.

ಸುಮಾರು 50 ಮಕ್ಕಳು ಈ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ಮುಕ್ತವಾಗಿ ತಮ್ಮ ಪ್ರಶ್ನೆಗಳನ್ನು ಕೇಳಿ ಸಂಶಯ ನಿವಾರಣೆ ಮಾಡಿಕೊಂಡರು.

ಎಲ್ಲಾ ಮಕ್ಕಳಿಗೂ ಉಚಿತವಾಗಿ ಟೂಥ್ ಬ್ರಶ್ ಮತ್ತು ಟೂಥ್ ಪೇಸ್ಟ್ ವಿತರಣೆ ಮಾಡಲಾಯಿತು.

ಅದೇ ರೀತಿ ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಸುಮಾರು 15 ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಉಚಿತವಾಗಿ ಸರೋಜಿನಿ ಪ್ರತಿಷ್ಠಾನದಿಂದ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News