ಮುಲ್ಕಿ : ಸ್ನೇಹ ಒಕ್ಕೂಟದಿಂದ ಕ್ರಿಸ್‌ಮಸ್ ಆಚರಣೆ

Update: 2017-01-04 13:04 GMT

ಮುಲ್ಕಿ, ಜ.4: ಒಬ್ಬರಿಗೊಬ್ಬರು ಪ್ರೀತಿ, ಸ್ನೇಹ, ಸೌಹಾರ್ದತೆಯಿಂದ ಬದುಕುವುದು ಮಾತ್ರವಲ್ಲದೆ ಇತರರಿಗೂ ಸಹಾಯ ಹಸ್ತ ನೀಡುವುದು ಕ್ರಿಸ್ಮಸ್ ಹಬ್ಬದ ಮಹತ್ವವಾಗಿದೆ ಎಂದು ಸಿಒಡಿಪಿ ಸಂಸ್ಥೆಯ ನಿರ್ದೇಶಕ ಓಸ್ವಲ್ಡ್ ಮೊಂತೆರೊ ಹೇಳಿದರು.

ಪಕ್ಷಿಕೆರೆ ರುಸೆಂಪ್‌ನಲ್ಲಿ ಜರಗಿದ ಸಿಒಡಿಪಿ ಪ್ರವರ್ದಿತ ಸ್ನೇಹ ಒಕ್ಕೂಟದಿಂದ ಕ್ರಿಸ್‌ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಮ್ರಾಲ್ ಗ್ರಾ.ಪಂ ಅಧ್ಯಕ್ಷ ನಾಗೇಶ್ ಅಂಚನ್ ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಮಿರಾನ್ ಹಾಜಿ ಹಾಗೂ ಸಿಒಡಿಪಿ ಸಂಸ್ಥೆಯ ಸಂಯೋಜಕ ರವಿಕುಮಾರ್ ಕ್ರಾಸ್ತ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರಿಂದ ಕ್ರಿಸ್ಮಸ್ ಸಂಬಂಧಿತ ಕಿರುನಾಟಕ, ನೃತ್ಯ ಹಾಗೂ ಕ್ರಿಸ್‌ಮಸ್ ಹಾಡುಗಳಿಂದ ಮನರಂಜಿಸಿದರು.

ಸ್ನೇಹ ಒಕ್ಕೂಟದ ಅಧ್ಯಕ್ಷ ರೋಕಿ ಸಲ್ದಾಹ್ನಾ ಸ್ವಾಗತಿಸಿದರು. ಪ್ರೀತಿ ಮಹಾಸಂಘದ ಅಧ್ಯಕ್ಷ ವಲೇರಿಯನ್ ಡಿ ಸೋಜಾ ವಂದಿಸಿದರು. ಹರಿಣಾಕ್ಷಿ ಕಾರ್ಯಕ್ರಮವನ್ನು ನಿರ್ವಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News