ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ

Update: 2017-01-04 13:15 GMT

ಮಂಗಳೂರು, ಜ.4: ಉಜಿರೆಯಲ್ಲಿ ಜ.27ರಿಂದ 29ರ ತನಕ ನಡೆಯುವ 21ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ-ತುಳು ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಸಾಧಕ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ, ಭೂತಾರಾಧನೆ-ಕೆಲವು ಅಧ್ಯಯನಗಳು, ಜಾಲಾಟ, ಭೂತಾರಾಧನೆ-ಜನಪದೀಯ ಅಧ್ಯಯನ, ಸಂಸ್ಕೃತಿಸಿರಿ ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನು ಚಿನ್ನಪ್ಪ ಗೌಡ ಮಾಡಿದ್ದಾರೆ. ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿವಿ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News