ಜ.6: ಎಚ್ಐಎಫ್ ನ ಪ್ರವಾದಿ ಜೀವನ ಸಂದೇಶ ಸಮಾರೋಪ

Update: 2017-01-05 06:33 GMT

ಮಂಗಳೂರು, ಜ.4: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ದಅ್ ವಾ ಯುನಿಟ್ ವತಿಯಿಂದ ಪ್ರವಾದಿ ಸ.ಅ.ರ ಜೀವನ ಸಂದೇಶದ ಅಭಿಯಾನದ ಸಮಾರೋಪ ಸಮಾರಂಭ ಜ.6ರಂದು ಸಂಜೆ 6:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.

ಅಲ್ ಅಸರ್ ಫೌಂಡೇಶನ್‌ನ ನಿರ್ದೇಶಕ ಅತರ್‌ಖಾನ್ ‘ಜಗತ್ತಿನ ಸಮಸ್ಯೆಗಳಿಗೆ ಪರಿಹಾರ’ ಎಂಬ ವಿಷಯದಲ್ಲಿ ಉರ್ದುವಿನಲ್ಲಿ  ಮತ್ತು ಡಿಸ್ಕವರಿ ಇಸ್ಲಾಮ್ ಎಜುಕೇಶನಲ್ ಟ್ರಸ್ಟ್‌ನ ನಿರ್ದೇಶಕ ಉಮರ್ ಶರೀಫ್ ‘ಇಸ್ಲಾಮೀ ಕಾನೂನು, ಮನುಕುಲದ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಭಾಷಣ ಮಾಡುಲಿರುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ನ ಅಧ್ಯಕ್ಷ ನಾಝಿಮ್ ಎಸ್.ಎಸ್ ವಹಿಸಲಿದ್ದಾರೆ ಎಂದು ಎಚ್ಐಎಫ್ ದಅ್ ವಾ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News