×
Ad

‘ನಿಟ್ಟೆ ಮಂಗಳೂರು ಮ್ಯಾರಥಾನ್ 2017’ ಮಾಹಿತಿ ಪತ್ರ ಬಿಡುಗಡೆ

Update: 2017-01-04 20:02 IST

ಮಂಗಳೂರು, ಜ.3: ನಿಟ್ಟೆ ಸಂಸ್ಥೆಯ ವತಿಯಿಂದ ದ.ಕ. ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಸಹಕಾರದೊಂದಿಗೆ ಫೆ.19ರಂದು ನಡೆಯುವ ‘ನಿಟ್ಟೆ ಮಂಗಳೂರು ಮ್ಯಾರಥಾನ್-2017’ ಇದರ ಮಾಹಿತಿ ಪತ್ರವನ್ನು ಇಂದು ಸಂಜೆ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ಜಿ. ಬಿಡುಗಡೆ ಮಾಡಿದರು.

ನಿಟ್ಟೆ ಯುನಿವರ್ಸಿಟಿಯ ಕುಲಪತಿ ಹಾಗೂ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ನಿಟ್ಟೆ ಯುನಿವರ್ಸಿಟಿಯ ಸಹ ಕುಲಪತಿ ವಿಶಾಲ್ ಹೆಗ್ಡೆ, ದ.ಕ. ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಕಾರ್ಯದರ್ಶಿ ತಾರನಾಥ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿರುವ ಇಬ್ಬರು ಕ್ರೀಡಾಪಟುಗಳಾದ ಶ್ರೀಧರ ಆಳ್ವ ಮತ್ತು ಅನಿಲ್ ಶೆಟ್ಟಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News