ಝೀನತ್ ಬಕ್ಷ್: ವಕ್ಫ್ ಸಂಸ್ಥೆಗೆ ಕರಡು ಮತದಾರರ ಪಟ್ಟಿ ಪ್ರಕಟ

Update: 2017-01-04 14:47 GMT

ಮಂಗಳೂರು, ಜ.4: ನಗರದ ಬಂದರ್‌ನ ಜೆ.ಎಂ.ರಸ್ತೆಯ ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿನ ತೀರ್ಮಾನದಂತೆ ಈ ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಾರ್ಡ್ ನಂ.1ರಿಂದ 25ರ ವರೆಗೆ ಮುಸ್ಲಿಂ ಪುರುಷರನ್ನು ಮತದಾರರನ್ನಾಗಿ ಗುರುತಿಸಿ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಸದಸ್ಯರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಸಲಹೆ, ಆಕ್ಷೇಪಣೆಗಳು ಇದ್ದಲ್ಲಿ ಜ.5ರಿಂದ 16ರವರೆಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿಯ ಅಧ್ಯಕ್ಷರಿಗೆ ಸಲ್ಲಿಸಬಹುದು.

ಸಲಹೆ, ಆಕ್ಷೇಪಣೆಗಳ ಪರಿಶೀಲನೆಯು ಜ.23ರಿಂದ 25ರವರೆಗೆ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯಲ್ಲಿ ಮಸೀದಿಯ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಷ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಕರಡು ಮತದಾರರ ಪಟ್ಟಿಯಲ್ಲಿ ಇರುವ ಸದಸ್ಯರು ತಮ್ಮ ಗುರುತಿನ ಚೀಟಿ, ಶುಲ್ಕ, ವಿಳಾಸದ ದಾಖಲಾತಿಗಳನ್ನು ಜ.26ರಿಂದ ಫೆ.4ರವರೆಗೆ ಸಲ್ಲಿಸಬಹುದು. 50 ರೂ. ಶುಲ್ಕ, ಸ್ಟಾಂಪ್ ಸೈಝ್‌ನ ಎರಡು ಭಾವಚಿತ್ರಗಳು, ವಿಳಾಸದ ದಾಖಲಾತಿಗಳು (ಚುನಾವಣಾ ಆಯೋಗದ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಇತ್ತೀಚಿನ ಬಾಡಿಗೆ ಕರಾರುಪತ್ರ ಅಥವಾ ನಿವಾಸದ ದೃಢೀಕರಣದ ಬಗ್ಗೆ ಸರಕಾರದ ಶಾಸನಬದ್ಧ ಕಚೇರಿಯಿಂದ ನೀಡಿದ ನಕಲು ಪ್ರತಿಗಳನ್ನು ಲಗತ್ತಿಸಿ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಕಚೇರಿಯಲ್ಲಿ ಕಚೇರಿಯ ಮ್ಯಾನೇಜರ್ ಅವರಲ್ಲಿ ಸಲ್ಲಿಸಲು ಕೋರಲಾಗಿದೆ.

ನಿವಾಸದ ದಾಖಲೆ, ಭಾವಚಿತ್ರ, ಗುರುತಿನ ಚೀಟಿಯ ಶುಲ್ಕವನ್ನು ನೀಡದೆ ಇರುವವರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಎಂದು ತಿಳಿಸಲಾಗಿದೆ.

ಅಂತಿಮ ಸದಸ್ಯರ ಮತದಾರರ ಪಟ್ಟಿಯನ್ನು ಫೆ.13ರಂದು ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿ ಕಚೇಯಲ್ಲಿ ಪ್ರಕಟಿಸಲಾಗುವುದು.

ಫೆ. 27ರಿಂದ ಮಾರ್ಚ್ 5ರವರೆಗೆ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿ ಕಚೇರಿಯಲ್ಲಿ ಗುರುತಿನ ಚೀಟಿ ವಿತರಣೆ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News