ಬೈಕ್ ಮರಕ್ಕೆ ಢಿಕ್ಕಿ : ಇಬ್ಬರು ದಾರುಣ ಸಾವು
Update: 2017-01-04 21:08 IST
ಕಾರ್ಕಳ , ಜ.4 : ಬೈಕ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣ ಸಾವನ್ನಪ್ಪಿದ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಮಂಗಳವಾರ ನಡೆದಿದೆ.
ನಿಟ್ಟೆ ಗ್ರಾಮದ ಅತ್ತೂರು ಪದವು ನಿವಾಸಿ ಅರುಣ್ ನಾಯ್ಕಾ(25) ಮತ್ತು ಕುಕ್ಕುಂದೂರು ನಿವಾಸಿ ರಕ್ಷಿತ್ ನಾಯ್ಕಾ (24) ಮೃತರು.
ಅತ್ತೂರು ಪದವಿನಲ್ಲಿ ಗೃಹಪ್ರವೇಶದ ವರ್ಷಾಚರಣೆ ಸಂಭ್ರಮವನ್ನು ಆಚರಿಸಿ ರಾತ್ರಿಯ ವೇಳೆ ರಕ್ಷಿತ್‌ನನ್ನು ಬಿಟ್ಟು ಬರಲು ಕುಕ್ಕುಂದೂರಿಗೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಜೋಡುರಸ್ತೆಯ ಬದಿಯಲ್ಲಿ ಬೃಹತ್ ಗಾತ್ರದ ಆಲದ ಮರವಿದ್ದು, ಬೈಕ್ ಗುದ್ದಿದ ಪರಿಣಾಮ ಆಲದ ಮರದ ಬೀಳುಗಳ ಮಧ್ಯೆ ಬೈಕ್ ನುಸುಳಿತ್ತು. ಸವಾರರಿಬ್ಬರು ಎಸೆಯಲ್ಪಟ್ಟ ಪರಿಣಾಮ, ಆಲದ ಮರದ ಬೀಳುಗಳ ಮಧ್ಯೆ ಒಬ್ಬರನ್ನೊಬ್ಬರು ಅಪ್ಪಿ ಹಿಡಿದ ರೀತಿಯಲ್ಲಿ ಕೊನೆಯುಸುರು ಎಳೆದಿದ್ದಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.