ಸಫಲತೆಗೆ ಕಠಿಣ ಪರಿಶ್ರಮ ಅಗತ್ಯ: ವಿನಯ ಹೆಗ್ಡೆ
ಶಿರ್ವ, ಜ.4: ಜೀವನದಲ್ಲಿ ಸಫಲತೆ ಪಡೆಯಲು ಕಠಿಣ ಪರಿಶ್ರಮದ ಹೊರತು ಅನ್ಯ ಮಾರ್ಗವಿಲ್ಲ. ಪ್ರಾಮಾಣಿಕತೆ ಮತ್ತು ಅನುಕರಣೀಯ ನಡತೆಯೇ ಬದುಕಿನ ಯಶಸ್ಸಿಗೆ ದಾರಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹೇಳಿದ್ದಾರೆ.
ಮಕ್ಕಳ ಮೇಲಿನ ಅತಿಯಾದ ಮಮತೆಯ ಕಾರಣ ಇಂದು ಹೆತ್ತವರು ತಮ್ಮ ಮಕ್ಕಳ ತಪ್ಪುಗಳನ್ನು ತಿದ್ದಲಾರದೆ ಶಿಕ್ಷಕರತ್ತ ನೋಡುವ ಪ್ರವೃತ್ತಿ ಇದೆ. ಇದು ಸರಿಯಲ್ಲ, ಮಕ್ಕಳ ಮನೋವೃತ್ತಿಯಲ್ಲಿನ ಬದಲಾವಣೆ ಆಗಬೇಕಾಗಿರುವುದು ಮನೆಯಲ್ಲಿಯೇ ಹೊರತು ಶಾಲೆಗಳಲ್ಲಷ್ಟೇ ಅಲ್ಲ. ಶಾಲೆಗಿಂತ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಿಗೆ ಭವಿಷ್ಯದ ಬಗ್ಗೆ ನಿಖರ ದಾರಿ ತೋರುವ ಜವಾಬ್ದಾರಿ ಶಿಕ್ಷಕರಷ್ಟೇ ಹೆತ್ತವರಿಗೂ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ, ದ.ಕ ಜಿಲ್ಲೆಗಳ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಸಂಘದ ಅಧ್ಯಕ್ಷೆ ಮಂಗಳೂರು ಕೆನರಾ ಹೈಸ್ಕೂಲಿನ ಪ್ರಾಂಶುಪಾಲೆ ಜೋಯ್ ಜೆ. ರೈ, ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ಆಡಳಿತಾಧಿಕಾರಿ ಪ್ರೊ. ವೈ.ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ, ದ.ಕ ಜಿಲ್ಲೆಗಳ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಸಂಘದ ಅ್ಯಧ್ಯಕ್ಷೆ ಮಂಗಳೂರು ಕೆನರಾ ಹೈಸ್ಕೂಲಿನ ಪ್ರಾಂಶುಪಾಲೆ ಜೋಯ್‌ಜೆ.ರೈ, ಸಂಘದ ಸಂಚಾಲಕ ವಿ.ಸುಬ್ಬಯ್ಯಹೆಗ್ಡೆ, ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಪ್ರಶಾಂತ್ ನಂಬಿಯಾರ್ ವರದಿ ವಾಚಿಸಿದರು.
ಸಂಸ್ಥೆಯ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ಡೆ, ಸಂಸ್ಥೆಯ ಸಾಧನೆ ಮತ್ತು ಸಾಧ್ಯತೆಗಳ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಾದ ಪುನೀತಾ ಸ್ವಾಗತಿಸಿದರು. ಶಮಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.