×
Ad

ಮನೆಮಂದಿಯೊಂದಿಗೆ ಜಗಳ : ವ್ಯಕ್ತಿ ಆತ್ಮಹತ್ಯೆ

Update: 2017-01-04 21:40 IST

ಬಂಟ್ವಾಳ , ಜ.4 : ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕದಲ್ಲಿ  ನಡೆದಿದೆ. 

ಆತ್ಮಹತ್ಯೆಗೈದ ವ್ಯಕ್ತಿಯನ್ನು ಕಲ್ಲಡ್ಕ ನಿವಾಸಿ ರಾಜೇಶ್(42) ಎಂದು ಗುರುತಿಸಲಾಗಿದೆ. 

ಇಂದು ಸಂಜೆಯ ವೇಳೆ ಕಲ್ಲಡ್ಕದಲ್ಲೆ ರಾ.ಹೆ.ಯ ಪಕ್ಕದಲ್ಲೇ ಇರುವ ಇವರ ಮನೆಯಲ್ಲಿ ಮನೆಮಂದಿಯೊಂದಿಗೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಇದರ ಬೆನ್ನಲ್ಲೇ ರಾಜೇಶ್ ಬಾವಿಗೆ ಹಾರಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಬೆನ್ನಲ್ಲೇ ನೂರಾರು ಜನ ಸಮೂಹ ಜಮಾಯಿಸಿದ್ದು, ಸ್ಥಳೀಯರ ನೆರವಿನಿಂದ ರಾಜೇಶ್ ಅವರನ್ನು ಜೀವಂತ ಮೇಲೆತ್ತುವ ಪ್ರಯತ್ನ ನಡೆಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದು, ಶವವನ್ನು ಬಂಟ್ವಾಳ ಆಸ್ಪತ್ರೆಗೆ ಸಾಗಿಸಲಾಯಿತು.

ಬಂಟ್ವಾಳ ನಗರ ಪೊಲೀಸರು ಸ್ಥಳದಲ್ಲಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣವೆನ್ನಲಾಗಿದೆಯಾದರೂ, ಸ್ಪಷ್ಟಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News