×
Ad

ಭಾರತದಲ್ಲಿ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಳ

Update: 2017-01-04 21:46 IST

ಹೊಸದಿಲ್ಲಿ,ಜ.4: 2015ನೇ ಸಾಲಿನಲ್ಲಿ ಭಾರತದಲ್ಲಿ ಸುಮಾರು 1,49,000 ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದು 2014ನೇ ಸಾಲಿನ ಅಂಕಿಅಂಶಗಳಿಗೆ ಹೋಲಿಸಿದರೆ ಶೇ.5.1ರಷ್ಟು ಅಧಿಕವಾಗಿದೆ. 2015ರಲ್ಲಿ ಪ್ರತಿ ಗಂಟೆಗೆ ಸರಾಸರಿ 17 ಜನರು ರಸ್ತೆ ಅಪಘಾತಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್‌ಸಿಆರ್‌ಬಿ)ವು ಬಹಿರಂಗಗೊಳಿಸಿದೆ.

ಹೀಗೆ ಸಾವನ್ನಪ್ಪಿದವರಲ್ಲಿ 18ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಮಾಣ ಶೇ.10.5ರಷ್ಟಿದೆ. 2015ರಲ್ಲಿ ಗರಿಷ್ಠ ಅಪಘಾತಗಳು ಉತ್ತರ ಪ್ರದೇಶ(ಶೇ.12.4)ದಲ್ಲಿ ಸಂಭವಿಸಿದ್ದು, ನಂತರದ ಸ್ಥಾನಗಳಲ್ಲಿ ತಮಿಳುನಾಡು(ಶೇ.10.5) ಮತ್ತು ಮಹಾರಾಷ್ಟ್ರ(ಶೇ.9.2) ರಾಜ್ಯಗಳಿವೆ ಎಂದು ಎನ್‌ಸಿಆರ್‌ಬಿ ಮಾಹಿತಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News