ನಾಳೆಯಿಂದ ಪಿಲಿಕುಲದಲ್ಲಿ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ

Update: 2017-01-04 17:04 GMT

ಮಂಗಳೂರು, ಜ. 4: ಭಾರತ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‌ನಲ್ಲಿ ಜ.6ರಿಂದ 15ರವರೆಗೆ 2ನೆ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

 ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ದೇಶದಾದ್ಯಂತ ಕರಕುಶಲಕರ್ಮಿಗಳು ಅವರು ತಯಾರಿಸಿದ ವಿವಿಧ ಕರಕುಶಲ ಸಾಮಗ್ರಿಗಳೊಂದಿಗೆ ಭಾಗವಹಿಸಲಿದ್ದಾರೆ. ಯಾವುದೇ ದಲ್ಲಾಳಿಗಳ ಸಂಪರ್ಕಲ್ಲದೇ ನೇರವಾಗಿ ಮೇಲಿನ ದಿನಗಳಲ್ಲಿ ನಾಗರಿಕರಿಗೆ ಕೈಕೆಟುಕುವ ದರದಲ್ಲಿ ಕರಕುಶಲ ಸಾಮಗ್ರಿಗಳನ್ನು ಮಾರಾಟ ಮಾಡುವರು.

ಈ ಪ್ರದರ್ಶನದಲ್ಲಿ ಸೀರೆಗಳು, ಬೆಡ್ ಕವರುಗಳು, ಚರ್ಮದ ಉತ್ಪನ್ನಗಳು, ಮರದ ಉತ್ಪನ್ನಗಳು, ರೇಷ್ಮೆ ಉತ್ಪನ್ನಗಳು, ಬ್ಯಾಗ್, ಆಭರಣಗಳು, ಟೆರಿಕೋಟಾ, ಕಲಾತ್ಮಕ ವಸ್ತುಗಳು, ತಾಮ್ರದ ಉತ್ಪನ್ನಗಳು ಇವೇ ಮುಂತಾದ ಕರಕುಶಲ ವಸ್ತುಗಳನ್ನು ಖರೀದಿಸಬಹುದಾಗಿದೆ. ಮೇಲೆ ತಿಳಿಸಿದ ದಿನಾಂಕಗಳಂದು ಪ್ರತಿದಿನ ಪೂರ್ವಾಹ್ನ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕರಕುಶಲ ಮಳಿಗೆಗಳು ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News