×
Ad

​‘ಖೇಲೋ ಇಂಡಿಯಾ’ ವಾರ್ಷಿಕ ಕ್ರೀಡಾ ಪಂದ್ಯಾಟ

Update: 2017-01-05 17:06 IST

ಮಂಗಳೂರು, ಜ.5: ಜಿಲ್ಲಾಡಳಿತ, ಜಿಪಂ, ಮನಪಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಖೇಲೋ ಇಂಡಿಯಾ’ ವಾರ್ಷಿಕ ಕ್ರೀಡಾ ಪಂದ್ಯಾಟದಲ್ಲಿ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
17 ಮತ್ತು 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 400 ಮತ್ತು 100 ಮಿ. ಓಟದ ಸ್ಪರ್ಧೆ, ವಾಲಿಬಾಲ್, ಕಬಡ್ಡಿ, ಉದ್ದ ಜಿಗಿತ, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಬಾಲಕರ ಶಾರ್ಟ್‌ಪುಟ್ ಎಸೆತದಲ್ಲಿ ಆಳ್ವಾಸ್ ಶಾಲೆಯ ನಾಗೆಂದ್ರ 15.37 ಮೀ. ಎಸೆತದ ಮೂಲಕ ಮೊದಲ ಸ್ಥಾನ ಪಡೆದರೆ, ಮೊಹನ್ ಪ್ರಭು ಎರಡನೆ ಸ್ಥಾನ ಹಾಗೂ ಆಳ್ವಾಸ್ ಶಾಲೆಯ ರಾಹುಲ್ ಮೂರನೆ ಸ್ಥಾನ ಪಡೆದರು.
ಬಾಲಕಿಯರ ಶಾರ್ಟ್‌ಪುಟ್ ಎಸೆತದಲ್ಲಿ ಆಳ್ವಾಸ್ ಶಾಲೆಯ ಕಾವ್ಯಾ 8.82 ಮೀ. ಎಸೆತದ ಮೂಲಕ ಮೊದಲ ಮತ್ತು ವಿಜಯಾಲಕ್ಷ್ಮೀ ಎರಡನೆ ಸ್ಥಾನ ಹಾಗೂ ಮರೀಯೆವಲ್ಲಿ ಶಾಲೆಯ ಸಹಾರಾ ಎಂಬವರು ಮೂರನೆ ಸ್ಥಾನ ಪಡೆದರು.
ಬಾಲಕಿಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಜೊಸನಾ ಮೊದಲ ಸ್ಥಾನ ಪಡೆದರೆ, ಐಶ್ವರ್ಯ ಎರಡನೇ ಸ್ಥಾನ, ಕೆನರಾ ಕಾಲೇಜಿನ ರಕ್ಷಿತಾ ಆರ್. ಶೆಣೈ ತೃತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News