‘ಅಳಕೆಯಲ್ಲಿ ಮಾದರಿ ಮಾರ್ಕೆಟ್ ನಿರ್ಮಾಣ’
Update: 2017-01-05 17:10 IST
ಮಂಗಳೂರು, ಜ.5: ನಗರದ ಅಳಕೆ ಮಾರುಕಟ್ಟೆಗೆ ಶಾಸಕ ಜೆ.ಆರ್.ಲೊಬೊ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಳಕೆಯಲ್ಲಿ ಉತ್ತಮ ಜಾಗವಿದ್ದು, ಸುಸಜ್ಜಿತ ಮಾರ್ಕೆಟ್ ನಿರ್ಮಿಸಬೇಕಾಗಿದೆ. ಇಲ್ಲಿ ವಾರದ ಸಂತೆಯನ್ನು ನಡೆಸಬೇಕು. ಮೀನು, ಮಾಂಸ, ಹಣ್ಣು ತರಕಾರಿಗಳಿಗೆ ಸ್ಟಾಲ್‌ಗಳನ್ನು ನಿರ್ಮಿಸಬೇಕು. ಇನ್ನೊಂದು ತಿಂಗಳ ಒಳಗೆ ಮಾರುಕಟ್ಟೆ ನಿರ್ಮಾಣದ ಕೆಲಸ ಆರಂಭಿಸಲಾಗುವುದು ಎಂದರು.
ಈ ಸಂದರ್ಭ ಪಾಲಿಕೆ ಅಧಿಕಾರಿಗಳಾದ ಶ್ರೀನಿವಾಸ, ಯಶವಂತ, ಲಕ್ಷ್ಮಣ್ ಪೂಜಾರಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಸಂತೋಷ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್, ಶಂಸುದ್ಧೀನ್ ಉಪಸ್ಥಿತರಿದ್ದರು.