×
Ad

ಪೀಸ್ ಸ್ಕೂಲ್‌ಗೆ ಪೊಲೀಸ್ ದಾಳಿ: ಎಂಡಿ ವಿದೇಶಕ್ಕೆ

Update: 2017-01-05 17:46 IST

ಕ್ಯಾಲಿಕಟ್,ಜ.5: ಧಾರ್ಮಿಕ ದ್ವೇಷ ಬೆಳೆಸುವ ಪಾಠ ಅಳವಡಿಸಿಕೊಳ್ಳಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ಕೊಚ್ಚಿಪೀಸ್ ಸ್ಕೂಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಎಂ. ಅಕ್ಬರ್ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇಂದು ಕಲ್ಲಿಕೋಟೆ ಪೀಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪೊಲೀಸರು ದಾಳಿ ನಡೆಸಿದ್ದು, ಶಾಲೆ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದ ದಾಖಲೆಗಳನ್ನು ವಶಪಡಿಸಿಕೊಂಡರು.

 ಸ್ಕೂಲ್ ಎಂಡಿ ಅಕ್ಬರ್‌ರನ್ನು ಪ್ರಶ್ನಿಸಲು ಪೊಲೀಸರು ಪೀಸ್ ಸ್ಕೂಲ್‌ಗೆ ಹೋಗಿದ್ದರು. ಆದರೆ ಅಕ್ಬರ್ ವಿದೇಶದಲ್ಲಿದ್ದಾರೆಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ ದ ನಂತರ ಇವರು ವಿದೇಶಕ್ಕೆ ಹೋದರು ಎಂದು ಪೊಲೀಸರು ಹೇಳುತ್ತಿದ್ದಾರೆ.

ಅವರು ಕತರ್‌ನಲ್ಲಿದ್ದಾರೆಂದು ಪೊಲೀಸರಿಗೆ ಮಾಹಿತಿ ದೊರಕಿದೆ. ಎಂಡಿಯ ಕಾರ್ಯದರ್ಶಿ ಮುಂತಾದವರನ್ನು ಪೊಲೀಸರು ಪ್ರಶ್ನಿಸಿದರು.

ಪ್ರತಿಯೊಂದು ಸ್ಥಳಗಳ ಸ್ಕೂಲ್ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಪೊಲೀಸರಿಗೆ ಲಭಿಸಿವೆ. ಪಠ್ಯ ಪದ್ಧತಿ, ಪಾಠಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ..

ತನಿಖೆಯ ಮೊದಲ ಹಂತದಲ್ಲಿ ಮುಂಬೈಯಲ್ಲಿ ಪಾಠ ಪುಸ್ತಕ ಮುದ್ರಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ವಿವಾದಿತ ಪುಸ್ತಕ ಮುದ್ರಿಸಿದ ಮುಂಬೈ ಬುರೂಜ್ ರಿಯಲೈಸೇಶನ್ ಪ್ರಕಾಶನ ಸಂಸ್ಥೆಯ ಮಾಲಕನನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News