ಎಸೆಸೆಫ್ ಮಹಾಸಭೆ
ಮಂಗಳೂರು, ಜ.5: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸೆಸೆಫ್) ಹೆಜಮಾಡಿ ಕೋಡಿ ಶಾಖೆಯ ಮಹಾಸಭೆಯು ಮದ್ರಸದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಇರ್ಶಾದ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ತಸ್ರೀಫ್ ಎಂ.ಎಚ್., ಕೋಶಾಧಿಕಾರಿಯಾಗಿ ಖಲೀಲ್ ಕೋಡಿ, ಉಪಾಧ್ಯಕ್ಷರಾಗಿ ಜಮಾಲ್ ಎಸ್.ಎಸ್. ಕೋಡಿ, ಇಸ್ಮಾಯೀಲ್ ಶಾಫಿ ಕೋಡಿ, ಜೊತೆ ಕಾರ್ಯದರ್ಶಿಯಾಗಿ ಕಬೀರ್ ಎಸ್.ಎಸ್. ಕೋಡಿ, ಸಬೀತ್ ಕೋಡಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಖೆಯ ಅಧೀನದಲ್ಲಿ ಎರಡು ಉಪ ಸಮಿತಿಗಳನ್ನು ರಚಿಸಲಾಯಿತು.
ಮೆಂಬರ್‌ಶಿಪ್ ರಿಲೀಫ್ ಸರ್ವಿಸ್ ಫಂಡ್‌ನ ಅಧ್ಯಕ್ಷರಾಗಿ ಸಿದ್ದೀಕ್ ಬಂಟ್ವಾಳ, ಕೋಶಾಧಿಕಾರಿಯಾಗಿ ಸಿಯಾನ್. ಇನ್ನೊಂದು ಉಪ ಸಮಿತಿಯಾದ ಇಖಾಮಾ ವೊಲಂಟಿಯರ್ಸ್ ಕೇರ್‌ನ ಅಧ್ಯಕ್ಷರಾಗಿ ಫಾರೂಕ್ ಬಂಟ್ವಾಳ, ಕೋಶಾಧಿಕಾರಿಯಾಗಿ ತಸ್ರೀಫಾ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ 26 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಸೆಕ್ಟರ್ ಕೌನ್ಸಿಲರ್ ಸದಸ್ಯರಾಗಿ 22 ಮಂದಿಯನ್ನು ನೇಮಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.