ಜ.7: ಎ.ಜೆ. ಆಸ್ಪತ್ರೆಯಲ್ಲಿ ‘ಸ್ಪೆಕ್ಟ್ರಮ್’ ಕಾರ್ಯಕ್ರಮ
Update: 2017-01-05 18:29 IST
ಮಂಗಳೂರು, ಜ.5: ನಗರದ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜ.7ರಂದು ‘ಹೃದ್ರೋಗ ಸಮ್ಮೇಳನ -ಸ್ಪೆಕ್ಟ್ರಮ್ 2017’ ನಡೆಯಲಿದೆ. ಈ ಸಮ್ಮೇಳನದಲ್ಲಿ ಹೃದ್ರೋಗ ತಜ್ಞರು, ಫಿಸಿಶಿಯನ್ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಸುಮಾರು 300 ತಜ್ಞವೈದ್ಯರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಉಪನ್ಯಾಸ, ಚರ್ಚಾಕೂಟ, ಕ್ವಿಝ್ ಮತ್ತು ಹೃದಯದ ಕುರಿತು ಮುಕ್ತ ಚರ್ಚೆ ಒಳಗೊಂಡಿದೆ ಎಂದು ಸಮ್ಮೇಳನದ ಸಂಚಾಲಕ ಡಾ. ಬಿ.ವಿ. ಮಂಜುನಾಥ್ ತಿಳಿಸಿದ್ದಾರೆ....