×
Ad

ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ

Update: 2017-01-05 18:47 IST

ಮಂಗಳೂರು, ಜ.5: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2017-18ನೇ ಸಾಲಿಗೆ ಕ್ರೀಡಾಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ (ಬಾಲಕರು:ಬಾಲಕಿಯರು) ಆಯ್ಕೆ ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ.

 ಜ. 9ರಂದು ಬೆಳಗ್ಗೆ 10ಗಂಟೆಗೆ ವಿಟ್ಲ ಸರಕಾರಿ ವಿಠಲ ಪ್ರೌಢಶಾಲೆ, 10ರಂದು ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಸರಕಾರಿ ಪ್ರೌಢಶಾಲೆ, ಪುಂಜಾಲಕಟ್ಟೆ, 11ರಂದು ಬೆ.10 ಕ್ಕೆ ಮಂಗಳ ಕ್ರೀಡಾಂಗಣ ಮಂಗಳೂರು, 12ರಂದು ಬೆಳಗ್ಗೆ 10 ಕ್ಕೆ ಸುಳ್ಯ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು, ಕೋಟಿ ಚೆನ್ನಯ್ಯ ಕ್ರೀಡಾಂಗಣ, ಪಂಜ, 13ರಂದು ಬೆ.10 ಗಂಟೆಗೆ ಪುತ್ತೂರು ತಾಲೂಕಿನ ಸರಕಾರಿ ತಾಲೂಕು ಕ್ರೀಡಾಂಗಣ ಕೊಂಬೆಟು ಇಲ್ಲಿ ಆಯ್ಕೆ ಪ್ರಕ್ರಿಯೆ ಏರ್ಪಡಿಸಲಾಗಿದೆ. ಕಿರಿಯರ ವಿಭಾಗಕ್ಕೆ 1. ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರಸ್ತುತ ವರ್ಷ 7 ನೇ ತರಗತಿಯಲ್ಲಿ ಕಲಿಯುತ್ತಿದ್ದು, 2017ನೇ ವರ್ಷಕ್ಕೆ 8ನೆ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು 1-6-2017ಕ್ಕೆ 14 ವರ್ಷ ಒಳಗಿನವರಾಗಿರಬೇಕು.

   ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯಮಟ್ಟದ ಕ್ರೀಡಾ ಶಾಲೆಗೆ ಆಯ್ಕೆ ಬಯಸುವವರು ವಿಭಾಗ ಮಟ್ಟದಲ್ಲಿ ಜ. 17 ಮತ್ತು 18ರಂದು ಜಿಲ್ಲಾ ಕ್ರೀಡಾಂಗಣ ಹಾಸನ ಹಾಗೂ ಜ.20 ಮತ್ತು 21ರಂದು ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರು ಇಲ್ಲಿ ನಡೆಸಲಾಗುವುದು.

            ಹಿರಿಯ ವಿಭಾಗದ ಕ್ರೀಡಾ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೆ ತರಗತಿಯಲ್ಲಿ ಕಲಿಯುತ್ತಿದ್ದು, 2017ನೆ ವರ್ಷಕ್ಕೆ ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು 1-6-2017 ಕ್ಕೆ 18 ವರ್ಷ ಒಳಗಿನವರಾಗಿರಬೇಕು. ಹಿರಿಯ ವಿಭಾಗದ ಕ್ರೀಡಾವಸತಿ ನಿಲಯಕ್ಕೆ ಆಯ್ಕೆಯನ್ನು ನೇರವಾಗಿ ವಿಭಾಗ ಮಟ್ಟದಲ್ಲಿ ಜ. 17 ಮತ್ತು 18ರಂದು ಜಿಲ್ಲಾ ಕ್ರೀಡಾಂಗಣ ಹಾಸನ ಹಾಗೂ ಜ. 20 ಮತ್ತು 21ರಂದು ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರು ಇಲ್ಲಿ ನಡೆಸಲಾಗುವುದು.

   ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಲಿಲ್ಲಿ ಪಾಯಸ್, ಸಹಾಯಕ ಯುವ ಸಬಲೀಕರಣ ಮತ್ತುಕ್ರೀಡಾಧಿಕಾರಿ, ಮಂಗಳೂರು ತಾಲೂಕು, ಮೊಬೈಲ್ ಸಂಖ್ಯೆ 9481016542. ಪಿ. ಎಸ್. ನವೀನ್, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಬಂಟ್ವಾಳ ತಾಲೂಕು- ಮೊ.9740365154. ಮಾಮಚ್ಚನ್ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಪುತ್ತೂರು- 9611474973, ದೇವರಾಜ್ ಮುತ್ಲಾಜೆ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಸುಳ್ಯ ತಾಲೂಕು- 9448548449, ಪ್ರಭಾಕರ್ ನಾರಾವಿ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಬೆಳ್ತಂಗಡಿ ತಾಲೂಕು-9449914186 ಇವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News