ಡಾ.ದೇವಕಿ ಎನ್.ಎಸ್.ರಿಗೆ ಉತ್ತಮ ಅಧ್ಯಾಪಕಿ ಪ್ರಶಸ್ತಿ
ಮಂಗಳೂರು, ಜ.5: ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಪ್ರವೃತ್ತರಾಗುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿರುವ ಶಿಕ್ಷಕಿ ಡಾ.ದೇವಕಿ ಎನ್.ಎಸ್. ಅವರು ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡಮಿಯು (ಇನ್ಸಾ) ಕೊಡ ಮಾಡುವ 2016ರ ಸಾಲಿನ ಉತ್ತಮ ಅಧ್ಯಾಪಕಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅಕಾಡಮಿಯ 82ನೆ ವಾರ್ಷಿಕ ಸಭೆಯಲ್ಲಿ ಅವರಿಗೆ ಇನ್ಸಾದ ಅಧ್ಯಕ್ಷರು ಇತ್ತೀಚೆಗೆ ಭುವನೇಶ್ವರದಲ್ಲಿ ಪ್ರದಾನ ಮಾಡಿದರು.
ಹೊಸದಿಲ್ಲಿಯ ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡಮಿಯು ಎಂಟು ದಶಕಗಳಷ್ಟು ಹಳೆದ ಭಾರತದ ಉನ್ನತ ವಿಜ್ಞಾನ ಸಂಸ್ಥೆಯಾಗಿದೆ.
ಡಾ.ದೇವಕಿ ಎನ್.ಎಸ್. ಅವರು ಮೈಸೂರು ವಿವಿಯ ಅಂಗ ಸಂಸ್ಥೆಯಾದ ಯುವರಾಜ ಕಾಲೇಜಿನಲ್ಲಿ ಮಾಲೆಕ್ಯುಲರ್ ಬಯಾಲಜಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ.ಕ. ಜಿಲ್ಲೆಯ ವಿಟ್ಲದ ನೀರ್ಕಜೆಯಲ್ಲಿ ಎನ್.ಸುಬ್ರಾಯ ಭಟ್ ಹಾಗೂ ಶಾರದಾ ದಂಪತಿಯ ಮಗಳಾಗಿರುವ ಇವರು ದಿವಂಗತ ಉಜ್ರೆ ಕೃಷ್ಣ ಭಟ್ಟ ಮತ್ತು ಶಂಕರಿ ಅಮ್ಮ ಅವರ ಸೊಸೆಯಾಗಿದ್ದಾರೆ.