ಆರೂರು ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ
ಬ್ರಹ್ಮಾವರ,ಜ.5: ಆರೂರಿನ ಮಹತೋಬಾರ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.28ರಿಂದ ಫೆ.2ರವರೆಗೆ ಸಮರ್ಗ ಜೀರ್ಣೋದ್ಧಾರಾಂಗ ಏಕೋತ್ತರ ಸಹಸ್ರ ಕುಂಬಾಭಿಷೇಕ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಎರಡು ದಶಕಗಳಲ್ಲಿಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗು ಬಂದಿರುವ ಈ ದೇವಸ್ಥಾನದಲ್ಲಿ 2005ರಲ್ಲಿ ಪುನಃಪ್ರತಿಷ್ಟೆ ಆಗಿದ್ದು, ಇದೀಗ ಹನ್ನೆರಡು ವರ್ಷಗಳ ನಂತರ ಸಂಪ್ರದಾಯದಂತೆ ಬ್ರಹ್ಮಕಲಶೋತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮ: ಜ.28ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ನಾಂದಿ, ನವಗ್ರಹ ಯಾಗ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಬೆಳಿಗ್ಗೆ 10ಗಂಟೆಗೆ ಸಚಿವ ಪ್ರಮೋದ್ ಮಧ್ವರಾಜ್ ಬಯಲು ರಂಗಮಂದಿರ ಉದ್ಘಾಟಿಸುವರು. ಸಂಜೆ 6ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸುವರು.
29ರಂದು ಬೆಳಿಗ್ಗೆ ಕಲಶಾಭಿಷೇಕ, ಮಧ್ಯಾಹ್ನ ಹೊರೆಕಾಣಿಕೆ, ರಾತ್ರಿ ಆಶ್ಲೇಷಾ ಬಲಿ, ಪೆರ್ಡೂರು ಮೇಳದವರಿಂದ ಯಕ್ಷಗಾನ, ಕೊಡವೂರು ನೃತ್ಯನಿಕೇತನ ತಂಡದ ಸದಸ್ಯರಿಂದ ನೃತ್ಯ ಸಿಂಚನ ನಡೆಯಲಿದೆ. 30ರಂದು ಬೆಳಿಗ್ಗೆ ಮಹಾವಿಷ್ಣುಯಾಗ, ಲಕ್ಷ ತುಳಸಿ ಅರ್ಚನೆ, 10ಗಂಟೆಗೆ ಸಭಾ ಕಾರ್ಯಕ್ರಮ ದಲ್ಲಿ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲ ತೀರ್ಥ ಸ್ವಾಮೀಜಿ, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ್ ಉಪಸ್ಥಿತರಿರುವರು.
ಸಂಜೆ 6ಗಂಟೆಗೆ ಸಂಸದೆ ಶೋಬಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಂಗಳೂರಿನ ಬಲೇ ಚಾ ಪರ್ಕತಂಡದಿಂದ ನಗೆ ನಾಟಕ ನಡೆಯಲಿದೆ.